ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್‌ನಿಂದ ಜನಾಂದೋಲನ ಯಾತ್ರೆ
ಸದ್ಯದಲ್ಲಿಯೇ ಚುನಾವಣೆಗಳು ಘೋಷಣೆಯಾಗಲಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಚುರುಕುತನವನ್ನು ತೋರಿಸಿದೆ.

ಇದರ ಮೊದಲ ಹಂತವಾಗಿ ಜನಾಂದೋಲನ ಯಾತ್ರೆಯನ್ನು ಪಕ್ಷ ಹಮ್ಮಿಕೊಂಡಿದ್ದು, ಬೆಂಗಳೂರಿನಿಂದ ಪ್ರಾರಂಭವಾದ ಈ ಯಾತ್ರೆ ಈಗಾಗಲೇ ಚಿತ್ರದುರ್ಗವನ್ನು ಸಮೀಪಿಸಿದೆ. ಎರಡನೇ ಹಂತದ ಯಾತ್ರೆ ಇದೇ ತಿಂಗಳ 17ರಿಂದ ಪ್ರಾರಂಭವಾಗಲಿದೆ ಎಂದು ತಿಳಿದುಬಂದಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಧರಂಸಿಂಗ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನಮ್ಮ ಅಧಿಕಾರಾವಧಿಯಲ್ಲಿ ಹೀಗೆ ಕಿತ್ತಾಟ ಮಾಡಲಿಲ್ಲ. ಅಧಿಕಾರವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿದ್ದೇವೆ. ಕಾಂಗ್ರೆಸ್‌ಗೆ ಮತಹಾಕುವುದರ ಮೂಲಕ ಸಮರ್ಥ ಸರ್ಕಾರವನ್ನು ನೀಡಲು ನೆರವಾಗಿ ಎಂದು ಮತದಾರರ ಮುಂದೆ ಭಿನ್ನವಿಸಿಕೊಳ್ಳುವುದು ತಮ್ಮ ಉದ್ದೇಶ ಎಂದು ಧರಂಸಿಂಗ್ ಈ ಸಂದರ್ಭದಲ್ಲಿ ನುಡಿದಿದ್ದಾರೆ.
ಮತ್ತಷ್ಟು
ಜಡೇಜಾ ರವಿ ಕಗ್ಗೊಲೆ
ಅಕ್ಷರ ದಾಸೋಹ ಯೋಜನೆಗೆ ಮಠಗಳೇ ಸ್ಪೂರ್ತಿ: ಕೃಷ್ಣ
ಧರ್ಮಸ್ಥಳ ಲಕ್ಷದೀಪೋತ್ಸವಕ್ಕೆ ಭವ್ಯತೆಯ ಮೆರುಗು
ಧರ್ಮಸ್ಥಳದಲ್ಲಿ ರಾಜ್ಯಮಟ್ಟದ ಪ್ರದರ್ಶನ ಮೇಳದ ಉದ್ಘಾಟನೆ
ಅಪ್ಪ-ಮಕ್ಕಳ ಪಕ್ಷದಲ್ಲಿ ಇರಲಾರೆ: ಪ್ರಕಾಶ್
ಸುಗುಣೇಂದ್ರರಿಗೆ ಪೇಜಾವರರಿಂದ ಪಂಥಾಹ್ವಾನ