ನಗರದ ಹೊರವಲಯದ ಎಲ್ ಅಂಡ್ ಟಿ ಬೈಪಾಸ್ ರಸ್ತೆಯಲ್ಲಿ ಕಾರೊಂದು ಲಾರಿಗೆ ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಇಬ್ಬರು ಮಕ್ಕಳು ಸೇರಿದಂತೆ 7 ಮಂದಿ ಅಯ್ಯಪ್ಪ ಭಕ್ತರು ಅಸುನೀಗಿದ ಭೀಕರ ಘಟನೆ ನಡೆದಿದೆ.
ಕಾರಿನಲ್ಲಿದ್ದ ಅಯ್ಯಪ್ಪ ಭಕ್ತರು ಬೆಂಗಳೂರಿನವರಾಗಿದ್ದು, ಶುಕ್ರವಾರ ಬೆಳಿಗ್ಗೆ ಅಯ್ಯಪ್ಪ ದರ್ಶನ ಮಾಡಿದ ಬಳಿಕ ನಗರಕ್ಕೆ ಹಿಂತಿರುಗುವಾಗ ಈ ದುರ್ಘಟನೆ ಸಂಭವಿಸಿದೆ.
ಗಾಯಗೊಂಡ ಭುವನ್(14) ಮತ್ತು ಅಸೋನಾ(10) ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸತ್ತವರರನ್ನು ಲೋಕೇಶ್(32), ಚೆನ್ನಕೇಶವಲು(40), ನಾರಾಯಣಸ್ವಾಮಿ(40), ಅವರ ಮಗಳು ಭೂವಿತಾ(10), ಲೋಕೇಶ್ ಖನ್ನಾ(30), ಮಾರುತಿ(40) ಮತ್ತು ಹರೀಶ್(10) ಎಂದು ಗುರುತಿಸಲಾಗಿದೆ.
|