ಬಹು ನೀರೀಕ್ಷಿತ ಬೆಂಗಳೂರು ಮಂಗಳೂರು ರೈಲು ಇಂದಿನಿಂದ ಶುರುವಾಗಲಿದೆ. ಸುಮಾರು 300.73 ಕೋಟಿ ರೂ ವೆಚ್ಚದ ಬೆಂಗಳೂರು ಮಂಗಳೂರು ರೈಲಿನ ಪ್ರಯಾಣಕ್ಕೆ ಇಂದು ಶುಭಾರಂಭ ಮಾಡಲಿದೆ. ಬಹು ನೀರೀಕ್ಷಿತ ಈ ಮಾರ್ಗದ ರೈಲು ಸಂಚಾರದಲ್ಲಿ ಪ್ರತಿನಿತ್ಯ 10,000 ಪ್ರಯಾಣಿಕರು ಪ್ರಯಾಣಿಸುವ ನೀರೀಕ್ಷೆ ಇದೆ.
ಈಗಾಗಲೇ 15ದಿನಗಳ ಮುಂಗಡ ಬುಕ್ಕಿಂಗ್ ಆಗಿದ್ದು ಮಂಗಳೂರು ಬೆಂಗಳೂರು ಪ್ರಯಾಣಿಗರ ಸಂಖ್ಯೆ ಮತ್ತೂ ಹೆಚ್ಚಾಗುವ ಸಾಧ್ಯತೆ ಇದೆ. ಪ್ರಸಕ್ತ ರೈಲು ಸಂಚಾರ ಮಾರ್ಗವು ಶಿರಾಡಿ ಘಾಟ್ನಂತ ಹಲವಾರು ಘಾಟ್ ಸೆಕ್ಷನ್ಗಳಿಂದ ಮುಕ್ತವಾಗಿದ್ದು ಸುಮಾರು 670 ಸೇತುವೆಗಳನ್ನೊಳಗೊಂಡಿದೆ.
ಸುಮಾರು 12 ಘಂಟೆಗಳ ಸುದೀರ್ಘ ಪ್ರಯಾಣದಲ್ಲಿ ಪ್ರಯಾಣಿಕನ ಸುವ್ಯವಸ್ಥೆಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಯಾಣ ಮಾರ್ಗದಲ್ಲಿ ಈ ಹಿಂದೆ ಬರುತ್ತಿದ್ದ ಘಾಟ್ ಜಂಕ್ಷನ್ಗಳಿಂದಾಗಿ ನಿದ್ರೆಗೆ ಭಂಗವಾಗುತಿತ್ತು, ಎಲ್ಲಿ ಏನೋ ಎಂಬ ಆತಂಕದ ಛಾಯೆ ಪ್ರಯಾಣಿಕನಲ್ಲಿರುತಿತ್ತು ಹಾಗಾಗಿ ಪರಿಶ್ರಮ ವಹಿಸಿ ಆ ಮಾರ್ಗಗಳನ್ನು ಬದಲಿಸಿದ್ದೇವೆ ಎಂದು ದಕ್ಷಿಣ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
|