ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ರಾಜ್ಯ ರಾಜಕೀಯಕ್ಕೆ ಮರಳಿದರೆ ಕಾಂಗ್ರೆಸಿಗೆ ಲಾಭವಾಗುವುದೋ ಅಥವಾ ಖರ್ಗೆಯವರಿಗೆ ನಷ್ಟವಾಗುವುದೋ ಎಂಬ ಜಾಣತನದ ಪ್ರಶ್ನೆ ರಾಜಕೀಯದ ಕಾರಿಡಾರುಗಳಲ್ಲಿ ಹರಿದಾಡುತ್ತಿದೆ.
ಕೃಷ್ಣರ ಆಗಮನಕ್ಕೆ ಸಂಬಂಧಿಸಿ ಕಾಂಗ್ರೆಸ್ ಬಣಗಳಲ್ಲಿ ಭಿನ್ನಾಭಿಪ್ರಾಯಗಳಿವೆ ಎಂಬ ಮಾತನ್ನು ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಅಲ್ಲಗಳೆಯುತ್ತಾರೆ.
ಈ ಕುರಿತು ಹೈಕಮಾಂಡ್ ಕೈಗೊಳ್ಳುವ ಯಾವುದೇ ತೀರ್ಮಾನವನ್ನು ಸ್ವಾಗತಿಸಿ ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತೇವೆ ಎಂಬುದು ಖರ್ಗೆಯವರ ಸ್ಪಷ್ಟನುಡಿ.
ಚುನಾವಣೆ ಎದುರಿಸಲು ಹಾಗೂ ದೇವೇಗೌಡರ ಪ್ರಾಬಲ್ಯ ಮುರಿಯಲು ಕಾಂಗ್ರೆಸಿಗೆ ಕೃಷ್ಣರ ಅನಿವಾರ್ಯತೆ ಇರುವುದರ ಕುರಿತು ಡಿಕೆಶಿ ಈಗಾಗಲೇ ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟು ಬಂದಿದ್ದಾರೆ. ಇದು ಹೈಕಮಾಂಡಿಗೂ ಸಮ್ಮತವಾಗಿದ್ದು ರಾಜ್ಯ ಕಾಂಗ್ರೆಸ್ಸಿಗೆ ಸದ್ಯದಲ್ಲಿಯೇ 'ಕೃಷ್ಣಾರ್ಪಣೆ'ಯಾಗಲಿದೆ ಎಂಬುದು ಅವರ ಅಭಿಮಾನಿಗಳ ನಿರೀಕ್ಷೆ.
|