ಸರ್ಕಾರದಲ್ಲಿ 'ಸಾತ್ ದಿನ್ ಕಾ ಸುಲ್ತಾನ್' ಆಗಿದ್ದ ಯಡಿಯೂರಪ್ಪ, ತಮ್ಮ ಮಗನ ಏಜೆನ್ಸಿಗೆ ನೆರವಾಗುವ ದೃಷ್ಟಿಯಿಂದ ಸೈಕಲ್ ಖರೀದಿಗೆ ಮಂಜೂರಾತಿ ನೀಡಿದ್ದಾರೆ ಎಂಬ 'ದಳಪತಿ' ಗೌಡರ ಕುಟುಂಬದ ಆರೋಪಕ್ಕೆ ಕೆರಳಿರುವ ಯಡಿಯೂರಪ್ಪ, ಈ ಹಗರಣ ಏನಿದ್ದರೂ ಹಿಂದೆ ಶಿಕ್ಷಣ ಸಚಿವರಾಗಿದ್ದ ಬಸವರಾಜ ಹೊರಟ್ಟಿಗೆ ಸಂಬಂಧಿಸಿದ್ದು ಎನ್ನುವ ಮೂಲಕ ಬಾಣವನ್ನು ದಳಪತಿಗಳೆಡೆಗೇ ತಿರುಗಿಸಿದ್ದಾರೆ.
ಬಡವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಏಕೈಕ ಉದ್ದೇಶದಿಂದ ಈ ಹಿಂದೆಯೇ ಕೈಗೊಳ್ಳಲಾಗಿದ್ದ ನಿರ್ಧಾರಕ್ಕೆ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು. ಈ ಪ್ರಸ್ತಾಪ ತಮ್ಮ ಸೃಷ್ಟಿಯಲ್ಲ. ಅದರಲ್ಲಿ ನಡೆದಿರಬಹುದಾದ ಹಗರಣಕ್ಕೆ ಹೊರಟ್ಟಿ ಹಾಗೂ ಗೌಡರ ಕುಟುಂಬವೇ ಕಾರಣ ಎಂಬುದು ಯಡಿಯೂರಪ್ಪನವರ ವಿವರಣೆ.
ಇಂಥ ಯಾವುದೇ ಬೃಹತ್ ಖರೀದಿ ಕುರಿತಾದ ಯೋಜನೆಗಳು ಸಿದ್ಧವಾಗುತ್ತಿದ್ದು ದೇವೇಗೌಡರ ಮನೆಯಲ್ಲಿ. ಏಕೆಂದರೆ ಅವರ ಪಕ್ಷದ ಸಚಿವರಿಗೆ ಈ ಕುರಿತು ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯವಿರಲಿಲ್ಲ. ಹೀಗಾಗಿ ದೇವೇಗೌಡರ ಕುಟುಂಬದವರೇ ಈ ಹಗರಣದ ರೂವಾರಿಗಳು. ಸಿಒಡಿ ಅಥವಾ ಸಿಬಿಐ ತನಿಖೆಯಾದರೆ ಸತ್ಯ ಹೊರಬೀಳುತ್ತದೆ ಎಂದು ಯಡಿಯೂರಪ್ಪ ಅಬ್ಬರಿಸಿದ್ದಾರೆ.
|