'ರೇವಣ್ಣ ನನ್ನನ್ನು ಯಡಿಯೂರಪ್ಪನವರ ಹೆಡ್ ಕ್ಲರ್ಕ್ ಎಂದು ಗೇಲಿ ಮಾಡಿದ್ದಾರೆ. ಪಕ್ಷದ ಒಳಿತಿಗಾಗಿ ಹೆಡ್ ಕ್ಲರ್ಕೇ ಏಕೆ, ಸಾಮಾನ್ಯ ಸೇವಕನಾಗಲೂ ನಾನು ಸಿದ್ಧ' ಎಂದು ಪ್ರತಿಕ್ರಿಯಿಸುರವ ಬಿಜೆಪಿ ಅಧ್ಯಕ್ಷ ಡಿ.ವಿ.ಸದಾನಂದ ಗೌಡರು, ಮಾಜಿ ಸಚಿವ ರೇವಣ್ಣನವರಿಗೆ ಚಳಿಜ್ವರ ಬಂದಂತಿದೆ; ಅದಕ್ಕೇ ಏನೇನೋ ಕನವರಿಸುತ್ತಿದ್ದಾರೆ ಎಂಬ ಮಾತಿನ ಚಾಟಿ ಬೀಸಿದ್ದಾರೆ.
ಮಲ್ಲೇಶ್ವರದ 18ನೇ ಅಡ್ಡರಸ್ತೆಯ ಬಸ್ ನಿಲ್ದಾಣದ ಸಮೀಪ ಬಿಜೆಪಿ ನಗರ ಯುವ ಮೋರ್ಚಾ ವತಿಯಿಂದ ಆಯೋಜಿಸಲಾಗಿದ್ದ ಸದಸ್ಯತ್ವ ನೋಂದಣೆ ಅಭಿಯಾನದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಗೌಡರು, ದೇವೇಗೌಡರ ಕುಟುಂಬ ರಾಜಕಾರಣದ ಯುಗ ಅಂತ್ಯವಾಗಿರುವುದನ್ನು ಮನಗಂಡಿರುವ ರೇವಣ್ಣ ಗಲಿಬಿಲಿಗೊಂಡು ಹೀಗೆಲ್ಲ ಮಾತನಾಡಿದ್ದಾರೆ ಎಂದು ಗೇಲಿ ಮಾಡಿದ್ದಾರೆ.
ಪಕ್ಷವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರಿಗೆ ಮುಂಬರಲಿರುವ ಚುನಾವಣೆಯಲ್ಲಿ ಟಿಕೆಟ್ ನೀಡದಿರಲು ತೀರ್ಮಾನಿಸಲಾಗಿದೆ ಎಂದೂ ಸಹ ಸದಾನಂದ ಗೌಡರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.
|