ಮಾಜಿ ಸಂಸದ ವಿಜಯ ಸಂಕೇಶ್ವರ ಸದ್ಯದಲ್ಲಿಯೇ ಬಿಜೆಪಿ ಸೇರಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ಈ ಹಿಂದೆ ಬಿಜೆಪಿ ವತಿಯಿಂದ ಸಂಸದರಾಗಿದ್ದ ಸಂಕೇಶ್ವರ ಕಾರಣಾಂತರಗಳಿಂದ ಪಕ್ಷ ತೊರೆದು ತಮ್ಮದೇ ಆದ ಕನ್ನಡ ನಾಡು ಪಾರ್ಟಿ ಎಂಬ ಪಕ್ಷವನ್ನು ಕಟ್ಟಿದ್ದರು. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅವರ ನಿರೀಕ್ಷೆಯನ್ನು ಮತದಾರರು ಹುಸಿಗೊಳಿಸಿದ್ದರು.
ಇದಾದ ನಂತರ ಜೆಡಿಎಸ್ ಜತೆಗೆ ಗುರುತಿಸಿಕೊಂಡ ಸಂಕೇಶ್ವರರು ಅಧಿಕಾರ ಹಸ್ತಾಂತರ ಮಾಡದ ದೇವೇಗೌಡರ ಧೋರಣೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಹೊರಬಂದದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
ಮುಂಬರಲಿರುವ ಚುನಾವಣೆಯಲ್ಲಿ ಸಂಕೇಶ್ವರರ ಸೇರ್ಪಡೆ ಪಕ್ಷಕ್ಕೆ ಎಷ್ಟರಮಟ್ಟಿಗೆ ನೆರವಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.
|