ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಟ್ವೆಂಟಿ-ಟ್ವೆಂಟಿ ಅಪವಿತ್ರ ಮೈತ್ರಿಯ ಸುತ್ತ...!'
ಟೆಸ್ಟ್ ಕ್ರಿಕೆಟ್ ಗುಂಗಲ್ಲಿದ್ದವರಿಗೆ ರೋಮಾಂಚನ ಉಂಟು ಮಾಡಿದ್ದು ಒನ್ ಡೇ ಕ್ರಿಕೆಟ್. ಅದನ್ನೂ ಮೀರಿಸಿದ್ದು ಇತ್ತೀಚಿನ ಟ್ವೆಂಟಿ-ಟ್ವೆಂಟಿ ಕ್ರಿಕೆಟ್ ಪರಿಕಲ್ಪನೆ. ಈಗ ಮತ್ತೊಂದು ಬಗೆಯ ಟ್ವೆಂಟಿ-ಟ್ವೆಂಟಿ ದಾಳಿ ಇಡಲಿದೆ. ಅದರೆ ಇದು ಕ್ರಿಕೆಟ್ಟಾಟದ ಕುರಿತದ್ದಲ್ಲ. ರಾಜಕೀಯ 'ಕೆಟ್ಟಾಟ'ದ ಕುರಿತಾದದ್ದು.

2004ರಿಂದ-07ರ ವರೆಗಿನ ರಾಜಕೀಯ ಡ್ರಾಮಾಗಳನ್ನು ಸನಿಹದಿಂದ ಬಲ್ಲ ಪತ್ರಕರ್ತ ಎಂ.ಎಸ್.ರಾಘವೇಂದ್ರ ಬರೆದಿರುವ 'ಟ್ವೆಂಟಿ-ಟ್ವೆಂಟಿ ಅಪವಿತ್ರ ಮೈತ್ರಿಯ ಸುತ್ತ...!' ಎಂಬ ಪುಸ್ತಕ ಡಿ.10ರಂದು ಪ್ರೆಸ್ ಕ್ಲಬ್ ಆವರಣದಲ್ಲಿ ಬಿಡುಗಡೆಯಾಗಲಿದೆ. ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಎ.ಕೆ.ಸುಬ್ಬಯ್ಯ ಸಮಾರಂಭದಲ್ಲಿ ಪಾಲ್ಗೊಳ್ಳಲಿರುವುದು ಮತ್ತೊಂದು ವಿಶೇಷ.

ಪತ್ರಕರ್ತ ರವಿ ಬೆಳಗೆರೆ ನಿರ್ಮಿಸಿ ನಿರ್ದೇಶಿಸಲಿರುವ 'ಮುಖ್ಯಮಂತ್ರಿ ಐ ಲವ್ ಯೂ' ಚಿತ್ರ ಹಾಗೂ ಬಾ.ಮಾ.ಹರೀಶ್ ನಿರ್ಮಾಣ ನಿರ್ದೇಶನದ 'ಯಡ್ಡಪ್ಪನ ಪ್ರೇಮ ಪ್ರಸಂಗ' ಚಿತ್ರಗಳು ಪ್ರಸಕ್ತ ರಾಜಕೀಯ ವಿದ್ಯಮಾನಗಳನ್ನು ವ್ಯಂಗ್ಯದೃಷ್ಟಿಯಿಂದ ನೋಡಲಿರುವ ಚಿತ್ರಗಳೆಂದು ಈಗಾಗಲೇ ಪ್ರಚಾರ ಪಡೆದಿವೆ. ಈಗ ಹೊರಬರಲಿರುವ ಎಂ.ಎಸ್.ರಾಘವೇಂದ್ರರ ಪುಸ್ತಕ ಏನೇನನ್ನು ಸ್ಫೋಟಿಸಲಿದೆ ಎಂದು ಕಾದುನೋಡಬೇಕಿದೆ.

ಸಂಯುಕ್ತ ಸರ್ಕಾರಗಳು ಅಸ್ತಿತ್ವಕ್ಕೆ ಬರುವ ಮುಂಚೆ ಇದ್ದ ಕೃಷ್ಣರ ಸರ್ಕಾರದ ಹಗರಣಗಳು, ದೇವೇಗೌಡರ ಪುತ್ರವ್ಯಾಮೋಹ, ಅವರ ಕುಟುಂಬದಲ್ಲಿನ ಆಂತರಿಕ ಕಲಹ, ಜನ ಸಾಮಾನ್ಯರಿಗೇ ಅಸಹ್ಯ ತರಿಸಿದ ಯಡಿಯೂರಪ್ಪ- ಕುಮಾರಸ್ವಾಮಿ ಜಗ್ಗಾಟ ಹಾಗೂ ರೇಣುಕಾಚಾರ್ಯ-ನರ್ಸ್ ಪ್ರಸಂಗಗಳು, 'ತಂತ್ರ'ವಿದ್ಯಾ ಪ್ರವೀಣ ದೇವೇಗೌಡರಿಗೆ ದೆಹಲಿಯ ಕಾಂಗ್ರೆಸ್ ವರಿಷ್ಠರು ಟೋಪಿ ಹಾಕಿದ್ದು ಇವೇ ಮೊದಲಾದ ಹಾಟ್ ಹಾಟ್ ವಿಷಯಗಳೇ ಈ ಪುಸ್ತಕದ ಹೂರಣವಾಗಿದ್ದು ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಮತ್ತಷ್ಟು
ಜೆಡಿಎಸ್-ಬಿಜೆಪಿ ಕಚ್ಚಾಟದಿಂದಾಗಿ ಚುನಾವಣೆ: ಎಚ್ಕೆ
ಸಂಕೇಶ್ವರ ಶೀಘ್ರವೇ ಬಿಜೆಪಿಗೆ: ಯಡಿಯೂರಪ್ಪ
ಮುಸ್ಲಿಮರು ನಮ್ಮ ಜತೆಗಿದ್ದಾರೆ: ದೇವೇಗೌಡ
ರೇವಣ್ಣರಿಗೆ ಚಳಿಜ್ವರ ಬಂದಂತಿದೆ: ಡಿವಿ
'ಸೈಕಲ್' ದಳದ ಹೊರಟ್ಟಿಗೆ ಸಂಬಂಧಿಸಿದ್ದು: ಯಡಿಯೂರಪ್ಪ
ಕೃಷ್ಣ ಬಂದರೆ ಬರಲಿ: ಖರ್ಗೆ