ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜನವರಿ 27ಕ್ಕೆ ರೈಲು ಬಂದ್
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ, ನಂಜುಂಡಪ್ಪ ವರದಿ, ರಾಜ್ಯದ ರೈಲ್ವೇ ಅಭಿವೃದ್ಧಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಅಖಿಲ ಕರ್ನಾಟಕ ಗಡಿ ಹೋರಾಟ ಸಮಿತಿ 2008ರ ಜನವರಿ 27ರಂದು ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ರಾಜ್ಯಾದ್ಯಂತ ರೈಲು ಬಂದ್ ನಡೆಸಲು ನಿರ್ಧರಿಸಿದೆ.

ಬಂದ್ ಆಚರಣೆಗೆ ಪೂರ್ವಭಾವಿಯಾಗಿ ರಾಜ್ಯಾದ್ಯಂತ ಜಿಲ್ಲಾ ಸಮ್ಮೇಳನಗಳನ್ನು ನಡೆಸಲಾಗುತ್ತಿದ್ದು, ಮೊದಲ ಸಮ್ಮೇಳನ ಡಿ.11ರಂದು ಮೈಸೂರಿನಲ್ಲಿ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ವಾಟಾಳ್ ನಾಗರಾಜ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಬೇಕೆಂದು ನಿರಂತರ ಹೋರಾಟ ಮಾಡಿ, ಕೇಂದ್ರ ಸರಕಾರದ ಗಮನ ಸೆಳೆಯುತ್ತಿದ್ದರೂ ಈ ಬಗ್ಗೆ ಯಾವುದೇ ರೀತಿಯಲ್ಲಿ ಗಮನ ಹರಿಸಿಲ್ಲ ಎಂದು ಆರೋಪಿಸಿದ ಅವರು, ಈ ನಿಟ್ಟಿನಲ್ಲಿ ರಾಜ್ಯದ ಸಂಸದರು ಮತ್ತು ಕೇಂದ್ರದ ಮೇಲೆ ಒತ್ತಡ ತರಬೇಕು ಎಂದು ಸಮಿತಿ ಒತ್ತಾಯಿಸಿದೆ.

ಅಲ್ಲದೆ ಡಾ.ನಂಜುಡಪ್ಪ ವರದಿ ಮೂಲೆಗುಂಪಾಗಿದೆ, ಡಾ.ಸರೋಜಿನಿ ಮಹಿಷಿ ಹಾಗೂ ವಾಟಾಳ್ ನಾಗರಾಜ್ ಮತ್ತು ಪ್ರೊ.ಬರಗೂರು ರಾಮಚಂದ್ರಪ್ಪ ವರದಿಗಳೂ ಗೆದ್ದಲು ಹಿಡಿದಿವೆ, ಈ ಎಲ್ಲ ವರದಿಗಳನ್ನೂ ಕೂಡಲೇ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.
ಮತ್ತಷ್ಟು
ಮಂಗಳೂರು-ಬೆಂಗಳೂರು ರೈಲಿಗೆ ಲಾಲು ಚಾಲನೆ
'ಟ್ವೆಂಟಿ-ಟ್ವೆಂಟಿ ಅಪವಿತ್ರ ಮೈತ್ರಿಯ ಸುತ್ತ...!'
ಜೆಡಿಎಸ್-ಬಿಜೆಪಿ ಕಚ್ಚಾಟದಿಂದಾಗಿ ಚುನಾವಣೆ: ಎಚ್ಕೆ
ಸಂಕೇಶ್ವರ ಶೀಘ್ರವೇ ಬಿಜೆಪಿಗೆ: ಯಡಿಯೂರಪ್ಪ
ಮುಸ್ಲಿಮರು ನಮ್ಮ ಜತೆಗಿದ್ದಾರೆ: ದೇವೇಗೌಡ
ರೇವಣ್ಣರಿಗೆ ಚಳಿಜ್ವರ ಬಂದಂತಿದೆ: ಡಿವಿ