ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೈಕಲ್ ಖರೀದಿ ವಿವಾದ-ದಾಖಲೆ ಬಹಿರಂಗ
NEWS ROOM
ಕಲ್ ಖರೀದಿ ಯೋಜನೆಯಲ್ಲಿ ತಮ್ಮ ವಿರುದ್ಧ ಮಾಡಲಾಗುತ್ತಿರುವ ಆರೋಪಗಳಿಗೆ ರೋಸಿಹೋಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೈಕಲ್ ಖರೀದಿ ಪ್ರಕ್ರಿಯೆಯ ಎಲ್ಲ ದಾಖಲೆಗಳನ್ನು ಪತ್ರಿಕೆಗಳಿಗೆ ಬಹಿರಂಗಗೊಳಿಸಿದರು.

2007ರ ಜೂನ್ 11ಕ್ಕೆ ಟೆಂಡರ್ ಸಲ್ಲಿಸಲು ಕೊನೆಯ ದಿನವಾಗಿದ್ದು, ಜುಲೈ 17ರಂದು ಟೆಂಡರ್ ತೆರೆಯಲಾಯಿತು. ಆಗಸ್ಟ್ 16ರಂದು ಕಾರ್ಯದರ್ಶಿಗಳ ಸಭೆ ನಡೆಯಿತು ಎಂದು ಹೇಳಿದರು.

ಟೆಂಡರ್ ಪ್ರಕ್ರಿಯೆಯಲ್ಲಿ ನಾಲ್ಕು ಸಂಸ್ಥೆಗಳು ಪಾಲ್ಗೊಂಡಿದ್ದು, ಈ ಕಂಪೆನಿಗಳು ಗಂಡು ಮಕ್ಕಳ ಸೈಕಲ್‌‌‌ಗೆ 2,132ರೂ. ಮತ್ತು ಹೆಣ್ಣುಮಕ್ಕಳ ಸೈಕಲ್‌‌ಗೆ 2,164.24ರೂ. ನಮೂದಿಸಿದ್ದು, ಇವುಗಳ ಜೊತೆಗೆ ಚರ್ಚೆ ನಡೆಸಿ ಅಂತಿಮವಾಗಿ ಪ್ರತಿ ಸೈಕಲ್‌‌‌ಗೆ

2,050ರೂ.ನಿಗದಿಪಡಿಸಲಾಯಿತು. ಸ್ವತಃ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರೇ ಇದರ ನಿರ್ವಹಣೆಯನ್ನು ನಡೆಸಿ, ಕಾರ್ಯದರ್ಶಿಗಳ ಸಭೆಯಲ್ಲಿ ಈ ದರವನ್ನು ನಿಗದಿಪಡಿಸಲಾಗಿತ್ತು. ಆದರೆ 2007ರ ನವೆಂಬರ್ 15ರವರೆಗೆ ಯಾವುದೇ ನಿರ್ಣಯ ಕೈಗೊಳ್ಳದೆ ಇದ್ದುದರಿಂದ 2007ರ ನವೆಂಬರ್ 15ರ ಸಚಿವ ಸಂಪುಟ ಸಭೆಯಲ್ಲಿ ಈ ಖರೀದಿ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು ಎಂದು ಯಡಿಯೂರಪ್ಪ ತಿಳಿಸಿದರು.

2006-07ರಲ್ಲಿ 2030ರೂಗಳಿಗೆ ಸೈಕಲ್ ಖರೀದಿಸಿದ್ದರೆ, 2007-08ರಲ್ಲಿ 2050ರೂ.ಗಳಿಗೆ ಖರೀದಿಸಲಾಯಿತು. ಈ ಸಾಲಿನಲ್ಲಿ ಸಂಸ್ಥೆಗಳು ನಮೂದಿಸಿದ್ದ ದರಕ್ಕಿಂತ 114ರೂ.ಗಳನ್ನು ಕಡಿಮೆ ದರದಲ್ಲಿ ಖರೀದಿಸಲಾಗಿದೆ ಎಂದು ಹೇಳಿದರು. ಟೆಂಡರ್ ಕರೆದಾಗ ಸಂಧಾನ ಸಭೆ ನಡೆಸಿದಾಗ ಮತ್ತು ಕಾರ್ಯದರ್ಶಿಗಳ ಸಭೆ ನಡೆಸಿದಾಗ ಬಸವರಾಜ ಹೊರಟ್ಟಿಯವರೇ ಪ್ರಾಥಮಿಕ ಶಿಕ್ಷಣ ಸಚಿವರಾಗಿದ್ದರು ಎಂದ ಅವರು ಹೊರಟ್ಟಿಯವರು ಒಟ್ಟಾರೆ ಇದರಲ್ಲಿ ಪ್ರಾಮಾಣಿಕ ಯತ್ನ ನಡೆಸಿದರು ಎಂದರು.
ಮತ್ತಷ್ಟು
ಜನವರಿ 27ಕ್ಕೆ ರೈಲು ಬಂದ್
ಮಂಗಳೂರು-ಬೆಂಗಳೂರು ರೈಲಿಗೆ ಲಾಲು ಚಾಲನೆ
'ಟ್ವೆಂಟಿ-ಟ್ವೆಂಟಿ ಅಪವಿತ್ರ ಮೈತ್ರಿಯ ಸುತ್ತ...!'
ಜೆಡಿಎಸ್-ಬಿಜೆಪಿ ಕಚ್ಚಾಟದಿಂದಾಗಿ ಚುನಾವಣೆ: ಎಚ್ಕೆ
ಸಂಕೇಶ್ವರ ಶೀಘ್ರವೇ ಬಿಜೆಪಿಗೆ: ಯಡಿಯೂರಪ್ಪ
ಮುಸ್ಲಿಮರು ನಮ್ಮ ಜತೆಗಿದ್ದಾರೆ: ದೇವೇಗೌಡ