ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ 20 ತಿಂಗಳ ಕಾಲಾವಧಿಯಲ್ಲಿ ಎಷ್ಟು ಜನಪ್ರಿಯರಾಗಿದ್ದರೋ ಅಷ್ಟೇ ಭ್ರಷ್ಟರಾಗಿದ್ದರು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ವೆಂಕಟಾಚಲ ಅವರು ಆರೋಪಿಸಿದ್ದಾರೆ.
ನಿಡುಮಾಮಿಡಿ ಮಾನವ ಧರ್ಮ ಪೀಠ ಆಯೋಜಿಸಿದ್ದ ಮಾನವ ಹಕ್ಕುಗಳ ದಿನಾಚರಣೆಯ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.
ತಮ್ಮ ಭಾಷಣದುದ್ದಕ್ಕೂ ಕುಮಾರಸ್ವಾಮಿಯವರನ್ನು ಜರೆದ ಅವರು, ರಾಜ್ಯ ಹಿಂದೆಂದೂ ಇಂತಹ ಭ್ರಷ್ಟ ಮುಖ್ಯಮಂತ್ರಿಯನ್ನು ಕಂಡಿರಲಿಲ್ಲ ಎಂದು ದೂಷಿಸಿದರು.
ಪಕ್ಷದ ಸಂಘಟನೆಗಾಗಿ ಅದ್ದೂರಿ ಕಾರ್ಯಕ್ರಮ ನಡೆದ ರೀತಿ ನೋಡಿದರೆ ಬೊಕ್ಕಸದ ಹಣವನ್ನು ಹೇಗೆ ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂಬುದು ಗೊತ್ತಾಗಲಿದೆ. ಸರಿಯಾದ ರೀತಿಯಲ್ಲಿ ಸೂಕ್ತ ವೇದಿಕೆಯಡಿ ತನಿಖೆ ನಡೆದರೆ ಕುಮಾರಸ್ವಾಮಿಯೂ ಸೇರಿದಂತೆ ಅಂದಿನ ಎಲ್ಲಾ ಸಚಿವರೂ ಜೈಲು ಸೇರಬೇಕಾಗುವಂತಹ ಸನ್ನಿವೇಶ ಎದುರಾಗುತ್ತದೆ ಎಂದು ಅರೋಪಿಸಿದರು.
|