ಮುಖ್ಯಮಂತ್ರಿಯಾಗದೇ ಮತ್ತೆ ತನ್ನ ಹುಟ್ಟೂರಿಗೆ ಮರಳಲ್ಲ. ಹೀಗೆಂದು ಪ್ರತಿಜ್ಞೆಯನ್ನು ಕೈಗೊಂಡವರು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ತನ್ನ ಹುಟ್ಟೂರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಬಹಿರಂಗ ಸಮಾರಂಭದಲ್ಲಿ ಮಾತನಾಡಿದ ಯಡಿಯೂರಪ್ಪ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಗೆದ್ದೇ ಗೆಲ್ತೀವಿ.
150 ಶಾಸಕರೊಂದಿಗೆ ವಿಧಾನ ಸಭೆ ಪ್ರವೇಶಿಸುತ್ತೇವೆ. ಅದಾದ ಬಳಿಕವೇ ಹುಟ್ಟೂರು ಶಿಕಾರಿಪುರಕ್ಕೆ ಬರೋದು ಹೀಗೆಂದು ಸಾರ್ವಜನಿಕ ಸಮಾರಂಭದಲ್ಲಿ ಪ್ರತಿಜ್ಞೆ ಕೈಗೊಂಡರು.
ರಾಜ್ಯಾದ್ಯಂತ ಎಲ್ಲೆಡೆ ಬಿಜೆಪಿ ಪಕ್ಷಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತೆ. ಜೆಡಿಎಸ್ ಪಕ್ಷದ ವಚನ ಭ್ರಷ್ಟತೆಯಿಂದ ಜನತೆ ರೋಸಿ ಹೋಗಿದ್ದಾರೆ. ಮುಖ್ಯಮಂತ್ರಿಯಾಗಿ ಮುಂದಿನ ಐದು ವರ್ಷ ಅಧಿಕಾರ ವಹಿಸಿಯೇ ತೀರುತ್ತೇನೆ ಎಂದು ನುಡಿದಿದ್ದಾರೆ.
|