ಹಿರಿಯ ಜೆಡಿಎಸ್ ನಾಯಕಕೇಂದ್ರದ ಮಾಜಿ ಸಚಿವ ಎಂ.ವಿ.ರಾಜಶೇಖರ ಮೂರ್ತಿ ಜೆಡಿಎಸ್ ಪಕ್ಷವನ್ನು ತೊರೆಯಲು ನಿರ್ಧರಿಸಿದ್ದಾರೆ. ಮಾಯಾವತಿ ನೇತೃತ್ವದ ಬಿಎಸ್ಪಿ ಪಕ್ಷವನ್ನು ಸೇರಲು ಅವರು ಚಿಂತನೆ ನಡೆಸಿದ್ದಾರೆ.
ರಾಜ್ಯ ಬಿಎಸ್ಪಿ ಅಧ್ಯಕ್ಷ ಗೋಪಾಲ್ ಹಾಗೂ ಬಿಎಸ್ ಪಿ ನಾಯಕ, ಹಾಗೂ ಸಂಸದರ ನೇತೃತ್ವದ ನಿಯೋಗವೊಂದು ರಾಜಶೇಖರ ಮೂರ್ತಿಯವರನ್ನು ಭೇಟಿಯಾಗಿ ಇಂದು ಮಾತುಕತೆ ನಡೆಸಿತು.
ಬಿಎಸ್ಪಿಯವರೊಂದಿಗೆ ರಾಜ್ಯ ರಾಜಕೀಯ ಪರಿಸ್ಥಿತಿಯ ಬಗ್ಗೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ.ಬಿಎಸ್ಪಿ ನಾಯಕರ ಆಹ್ವಾನವನ್ನು ಪುರಸ್ಕರಿಸಿರುವ ಮೂರ್ತಿಯವರು ಪಕ್ಷದ ನೇತೃತ್ವವನ್ನು ಕರ್ನಾಟಕದಲ್ಲಿ ವಹಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಆದರೆ ಪಕ್ಷದ ತಮ್ಮ ಬೆಂಬಲಿಗರ ನಿರ್ಧಾರವೇ ಅಂತಿಮ ಎಂದಿದ್ದಾರೆ.
ಲಿಂಗಾಯಿತ ಸಮುದಾಯದ ಹಿರಿಯ ನಾಯಕರಾಗಿರುವ ರಾಜಶೇಖರ ಮೂರ್ತಿ ಈ ಹಿಂದೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷವನ್ನು ತೊರೆದು ಜೆಡಿಎಸ್ ಸೇರಿದ್ದರು. ಇದೀಗ ಮೂರ್ತಿ ಬಹುಜನ ಸಮಾಜವಾದಿ ಪಕ್ಷದತ್ತ ಹಾದಿ ಹಿಡಿಯುವ ಸೂಚನೆ ರಾಜ್ಯ ರಾಜಕೀಯದಲ್ಲಿ ಹಲವು ಕುತೂಹಲಗಳನ್ನು ಹುಟ್ಟುಹಾಕಿತ್ತು.
ಎಂ.ಪಿ.ಪ್ರಕಾಶ್, ಕುಮಾರಸ್ವಾಮಿ ಮಾತುಕತೆ
ಬೆಂಗಳೂರು : ಜೆಡಿಎಸ್ ಬಂಡಾಯ ನಾಯಕ ಎಂಪಿ ಪ್ರಕಾಶ್ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಭಾನುವಾರ ಭೇಟಿಯಾಗಿ ಮಾತುಕತೆ ನಡೆಸಿದರು. ಪ್ರಕಾಶ್ ಜತೆಗಿರುವ ಶಾಸಕರನ್ನು ಮನವೊಲಿಸುವ ಪ್ರಯತ್ನವಾಗಿ ಈ ಮಾತುಕತೆ ನಡೆದಿದೆ. ಆದರೆ ಮಾತುಕತೆಯ ವಿವರಗಳನ್ನು ಮಾಧ್ಯಮದೊಂದಿಗೆ ಹಂಚಿಕೊಲ್ಳಲು ಇಬ್ಬರೂ ನಾಯಕರು ನಿರಾಕರಿಸಿದ್ದಾರೆ.
ಪ್ರಕಾಶ್ ಜತೆಗಿರುವ ಶಾಸಕರ ಮನವೊಲಿಸುವ ಸಂಬಂಧ ಮಾತುಕತೆಗೆ ಶನಿವಾರವೇ ದಿನಾಂಕ ನಿಗದಿಯಾಗಿತ್ತು ಆದರೆ ಪ್ರಕಾಶ್ ತಮ್ಮ ಕ್ಷೇತ್ರ ಹೂವಿನ ಹಡಗಲಿಯಲ್ಲಿದ್ದ ಕಾರಣದಿಮದಾಗಿ ಇಬ್ಬರೂ ನಾಯಕ ಶನಿವಾರದ ,ಮಾತುಕತೆ ಕಾರ್ಯಕ್ರಮ ರದ್ದುಗೊಂಡಿತ್ತು.
|