ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಕಾಶ್ ಮನವೊಲಿಕೆ ಯತ್ನ ವಿಫಲ
ಎಂ.ಪಿ.ಪ್ರಕಾಶ್‌ರನ್ನು ಜೆಡಿಎಸ್‌ನಲ್ಲಿಯೇ ಉಳಿಸಿಕೊಳ್ಳುವ ಪ್ರಯತ್ನಗಳು ವಿಫಲಗೊಂಡಿವೆ.

ತಮ್ಮನ್ನು ಜೆಡಿಎಸ್‌ನಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸಿದ ಚೆಲುವರಾಯಸ್ವಾಮಿಯವರಿಗೆ ಪ್ರಕಾಶ್ ಈ ಕುರಿತು ಸ್ಪಷ್ಟ ಉತ್ತರವನ್ನು ನೀಡಿದ್ದು ಉಳಿದ ಮುಖಂಡರು ಈ ತಿಂಗಳ 12ನೇ ತಾರೀಖಿನಂದು ನಡೆಯಲಿರುವ ಸಮಾನ ಮನಸ್ಕರ ಸಭೆಯಲ್ಲಿ ತಮ್ಮ ನಿರ್ಧಾರ ಪ್ರಕಟಿಸುವ ಸೂಚನೆಯಿದೆ.

ಎಂ.ಪಿ.ಪ್ರಕಾಶ್ರವರ ಕ್ಷೇತ್ರದ ಜನತೆಯೂ ಸಹ ಪ್ರಕಾಶ್ ಜೆಡಿಎಸ್‌ನಲ್ಲಿಯೇ ಉಳಿಯಲಿ ಎಂಬ ಸಲಹೆ ನೀಡಿದ್ದಾರೆ. ಆದ್ದರಿಂದ ನೀವು ಇಲ್ಲಿಯೇ ಉಳಿದರೆ ಪಕ್ಷಕ್ಕೆ ಹಾಗೂ ವೈಯಕ್ತಿಕ ರಾಜಕೀಯ ಭವಿಷ್ಯಕ್ಕೆ ಒಳ್ಳೆಯದು ಎಂದು ಚೆಲುವರಾಯಸ್ವಾಮಿಯವರು ಮನವೊಲಿಸಲು ಪ್ರಯತ್ನಿಸಿದಾಗ, ಈಗಾಗಲೇ ನಾನು ಬಹಳ ದೂರ ಬಂದಿರುವೆ, ಉಳಿದುಕೊಳ್ಳುವ ಸ್ಥಿತಿಯಲ್ಲಿಲ್ಲ ಎಂಬ ಅಭಿಪ್ರಾಯವನ್ನು ಪ್ರಕಾಶ್ ವ್ಯಕ್ತಪಡಿಸಿದರೆಂದು ಮೂಲಗಳು ತಿಳಿಸಿವೆ.

ಈ ತಿಂಗಳ 12ರಂದು ನಡೆಯಲಿರುವ ಸಮಾನ ಮನಸ್ಕರ ಸಭೆಯಲ್ಲಿ ಶರಣ ಬಸಪ್ಪ ದರ್ಶನಾಪುರ, ಸಂತೋಷ್ ಲಾಡ್, ಮಹದೇವ ಪ್ರಸಾದ್, ಅಮರೇಗೌಡ ಬೈಯಾಪುರ, ಸೂರ್ಯನಾರಾಯಣ ರೆಡ್ಡಿ, ಬಾಲರಾಜು, ಎಂ.ವೈ.ಪಾಟೀಲ್ ಹಾಗೂ ಬಿ.ಸಿ.ಪಾಟೀಲ್ ಮೊದಲಾದವರು ತಮ್ಮ ಮುಂದಿನ ರಾಜಕೀಯ ನಿರ್ಧಾರಗಳನ್ನು ಪ್ರಕಟಿಸಲಿದ್ದಾರೆ ಎಂದು ತಿಳಿದುಬಂದಿದೆ.
ಮತ್ತಷ್ಟು
ಬಿಎಸ್ಪಿಯತ್ತ ರಾಜಶೇಖರಮೂರ್ತಿ ಚಿತ್ತ
ಮುಖ್ಯಮಂತ್ರಿಯಾದ ಮೇಲೇ ಹುಟ್ಟೂರಿಗೆ: ಯಡ್ಡಿ
ಧರ್ಮಸ್ಥಳ ಲಕ್ಷದೀಪೋತ್ಸವಕ್ಕೆ ಲಕ್ಷ ಲಕ್ಷ ಜನ
ಹಣ ದುರ್ಬಳಕೆ ಆರೋಪ ನಿರಾಧಾರ: ಯಡಿಯೂರಪ್ಪ
ಕುಮಾರ ಭ್ರಷ್ಟ ಮುಖ್ಯಮಂತ್ರಿ: ಲೋಕಾಯುಕ್ತ
ಸೈಕಲ್ ಖರೀದಿ ವಿವಾದ-ದಾಖಲೆ ಬಹಿರಂಗ