ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಾಹಿತ್ಯ ಸಮ್ಮೇಳನಕ್ಕೆ ಪರ್ಯಾಯವಲ್ಲ: ಜಿ.ರಾಮಕೃಷ್ಣ
ಸಾಹಿತ್ಯ ಲೋಕದಲ್ಲಿ ಸಾಕಷ್ಟು ಕಲುಷಿತ ವಾತಾವರಣವಿದೆ. ಉಡುಪಿಯಲ್ಲಿ ಮುಂದೆ ನಡೆಯಲಿರುವ ಸಾಹಿತ್ಯ ಸಮ್ಮೇಳನ ಜನಹಿತಕ್ಕೆ ಭಿನ್ನವಾದ ರೀತಿಯಲ್ಲಿ ನಡೆಯದಂತೆ ಸಾಹಿತ್ಯ ಪರಿಷತ್ತು ಎಚ್ಚರ ವಹಿಸಬೇಕು ಎಂದು ಸೌಹಾರ್ದ ಸಮ್ಮೇಳನಾಧ್ಯಕ್ಷ ಜಿ.ರಾಮಕೃಷ್ಣ ತಿಳಿಸಿದ್ದಾರೆ.

ಸೌಹಾರ್ದ ಸಮ್ಮೇಳನ ಸಾಹಿತ್ಯ ಸಮ್ಮೇಳನಕ್ಕೆ ಪರ್ಯಾಯವಲ್ಲ, ಬದಲಿಗೆ ಪೂರಕವಾದದ್ದು ಎಂದು ಸ್ಪಷ್ಟೀಕರಿಸಿದ ಅವರು, ತಾವು ಯಾರ ಪರ ನಿಲ್ಲುತ್ತೇವೆ ಎಂಬುದನ್ನು ಘಂಟಾಘೋಷವಾಗಿ ಸಾಹಿತಿಗಳು ಘೋಷಿಸುವ ಧೈರ್ಯ ತೋರಬೇಕು ಎಂದು ಕರೆಕೊಟ್ಟರು.

ನಮಗೆ ಬೇಕಾಗಿರುವ ಸಾಹಿತ್ಯ ಎಂಥದ್ದು, ಗಡಿ ಮತ್ತು ನೀರಿನ ಸಮಸ್ಯೆ ಇತ್ಯರ್ಥಗೊಳಿಸುವುದು ಹೇಗೆ, ರಾಜ್ಯದಲ್ಲಿ ಕನ್ನಡಕ್ಕೆ ಸಿಗಬೇಕಾದ ಸ್ಥಾನಮಾನ ಏನು ಎಂಬುದರ ಕುರಿತು ಆದ್ಯತೆ ಸಿಗಬೇಕು ಎಂದು ರಾಮಕೃಷ್ಣ ಅಭಿಪ್ರಾಯಪಟ್ಟರು.

ಇಟ್ಟಿಗೆ, ಸೇತುವೆ ವಿಷಯಗಳಿಗೆ ಅಂಟಿಕೊಂಡಿದ್ದ ಮಂದಿ ಈಗ ಸಾಹಿತ್ಯ ಕ್ಷೇತ್ರಕ್ಕೂ ಲಗ್ಗೆ ಹಾಕುತ್ತಿದ್ದಾರೆ. ಇದೇ ಧಾಟಿ ಮುಂದುವರಿದಲ್ಲಿ ಸಾಹಿತ್ಯದಲ್ಲಿ ಜನವಿರೋಧಿ ಮೌಲ್ಯಗಳು ತುಂಬಿಕೊಳ್ಳಬಹುದು. ಹೀಗಾಗದಂತೆ ತಡೆಯಬೇಕು ಎಂದು ರಾಮಕೃಷ್ಣ ಕರೆಕೊಟ್ಟರು.
ಮತ್ತಷ್ಟು
ಪ್ರಕಾಶ್ ಮನವೊಲಿಕೆ ಯತ್ನ ವಿಫಲ
ಬಿಎಸ್ಪಿಯತ್ತ ರಾಜಶೇಖರಮೂರ್ತಿ ಚಿತ್ತ
ಮುಖ್ಯಮಂತ್ರಿಯಾದ ಮೇಲೇ ಹುಟ್ಟೂರಿಗೆ: ಯಡ್ಡಿ
ಧರ್ಮಸ್ಥಳ ಲಕ್ಷದೀಪೋತ್ಸವಕ್ಕೆ ಲಕ್ಷ ಲಕ್ಷ ಜನ
ಹಣ ದುರ್ಬಳಕೆ ಆರೋಪ ನಿರಾಧಾರ: ಯಡಿಯೂರಪ್ಪ
ಕುಮಾರ ಭ್ರಷ್ಟ ಮುಖ್ಯಮಂತ್ರಿ: ಲೋಕಾಯುಕ್ತ