ಜೀವನೋಪಾಯಕ್ಕಾಗಿ ನಾವು ನಡೆಸುವ ಉದ್ಯೋಗಗಳನ್ನೇ ಜನ ಮೆಚ್ಚುವ ರೀತಿಯಲ್ಲಿ ಮಾಡಿದರೆ ಅದು ಭಗವಂತನಿಗೆ ಪ್ರೀತಿಯಾಗುತ್ತದೆ ಎಂದು ಪೇಜಾವರ ಶ್ರೀಗಳಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ಪ್ರದೇಶ ಹೋಟೆಲು ಮತ್ತು ಉಪಾಹಾರ ಮಂದಿರಗಳ ಸಂಘದ ಸುವರ್ಣ ಮಹೋತ್ಸವ ಭವನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ತಮ್ಮ ಕೆಲಸಗಳಿಂದ ಸಮಾಜಕ್ಕೆ ಉಪಯೋಗವಾಗುವಂತೆ ಹೋಟೆಲು ಉದ್ಯಮಿಗಳು ಚಟುವಟಿಕೆ ನಡೆಸುತ್ತಿರುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.
ಸಾಮಾನ್ಯವಾಗಿ 60-70 ವರ್ಷ ವಯಸ್ಸಾದ ಮೇಲೆ ಮನುಷ್ಯನಿಗೆ ಸಾವಿನ ಭಯ ಕಾಡಲು ಶುರುವಾಗುತ್ತದೆ. ಅದರೆ ಸಂಸ್ಥೆಯೊಂದಕ್ಕೆ 60-70 ವರ್ಷ ವಯಸ್ಸಾಯಿತೆಂದರೆ ಅದು ಗಟ್ಟಿಯಾಯಿತು ಎಂದರ್ಥ. ಅದೇ ರೀತಿಯಲ್ಲಿ ಈ ಸಂಘವೂ ಚಿರಾಯವಾಗಲಿ ಎಂದು ಶ್ರೀಗಳು ಆಶೀರ್ವದಿಸಿದರು.
ಸಂಘದ ಪದಾಧಿಕಾರಿಗಳಾದ ಇನ್ನ ಶ್ರೀನಿವಾಸರಾವ್, ಎನ್.ಆರ್.ನಾರಾಯಣರಾವ್, ಕೆ.ಎಲ್.ರಾಮನಾಥ್ ಭಟ್ ಹಾಗೂ ಎಚ್.ವಿ.ಶಾಂತಾರಾಮ್ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
|