ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜಕೀಯ ಮರು ವ್ಯಭಿಚಾರ: ಎ.ಕೆ.ಸುಬ್ಬಯ್ಯ
ರಾಜ್ಯ ರಾಜಕಾರಣದಲ್ಲಿ ನಡೆದಿರುವುದು ಅಪವಿತ್ರ ಮೈತ್ರಿಯಲ್ಲ, ರಾಜಕೀಯ ಮರು ವ್ಯಭಿಚಾರ. ಹೀಗೆಂದು ವ್ಯಾಖ್ಯಾನಿಸಿದವರು ಮಾಜಿ ವಿಧಾನ ಪರಿಷತ್ ಸದಸ್ಯ ಎ.ಕೆ.ಸುಬ್ಬಯ್ಯ.

ಸೋಮವಾರ ನಗರದ ಪ್ರೆಸ್ಕ್ಲಬ್ನಲ್ಲಿ ಪತ್ರಕರ್ತ ಎಂ.ಎಸ್.ರಾಘವೇಂದ್ರ ಬರೆದಿರುವ ಟ್ವೆಂಟಿ-ಟ್ವೆಂಟಿ ಅಪವಿತ್ರ ಮೈತ್ರಿಯ ಸುತ್ತ...! ಕೃತಿಯ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಇದು ಅಪವಿತ್ರ ಮೈತ್ರಿಯಲ್ಲ, ಮರುಮದುವೆಯೂ ಅಲ್ಲ; ರಾಜಕೀಯ ಮರು ವ್ಯಭಿಚಾರ ಎಂದು ಕರೆಯಬಹುದು. ಇಂಥ ಅಪಸವ್ಯಗಳು ಇನ್ನು ಮುಂದೆ ನಡೆಯಬಾರದು ಎಂಬ ಅರಿವು ಮೂಡಿಸುವಲ್ಲಿ ಜನರಿಗೆ ಹಾಗೂ ವಿಚಾರವಂತರಿಗೆ ಈ ಪುಸ್ತಕ ಮಾರ್ಗದರ್ಶಿಯಾಗಬಹುದು. ಜನರಿಗೆ ಎಲ್ಲ ಪಕ್ಷಗಳ ಹಣೆಬರಹವೂ ಗೊತ್ತಾಗಿ ಅವುಗಳಿಗೆ ಪಾಠ ಕಲಿಸಲು ಸಾಕಷ್ಟು ಕಾಲಾವಕಾಶ ಬೇಕು. ಅದಕ್ಕಾಗಿ ಕನಿಷ್ಠಪಕ್ಷ ಒಂದು ವರ್ಷವಾದರೂ ರಾಷ್ಟ್ತ್ರಪತಿ ಆಡಳಿತ ಮುಂದುವರಿಯಬೇಕು ಎಂದು ಸುಬ್ಬಯ್ಯ ನುಡಿದರು.

ಪುಸ್ತಕವನ್ನು ಬಿಡುಗಡೆ ಮಾಡಿದ ಪತ್ರಕರ್ತ ಕೆ.ಸತ್ಯನಾರಾಯಣ ಮಾತನಾಡುತ್ತಾ, ಭ್ರಷ್ಟಾಚಾರ ರಾಜಕೀಯದ ಜಾಡ್ಯವಾಗಿದೆ. ಎಲ್ಲರ ಕಾಲೂ ಕೆಸರಲ್ಲಿ ಹೂತಿದ್ದು ಯಾರೂ ಆದರ್ಶಪ್ರಾಯರಾಗಿಲ್ಲ. ಭ್ರಷ್ಟಾಚಾರದ ವಿರುದ್ಧ ಈ ಪುಸ್ತಕ ದನಿಯೆತ್ತಿದೆ. ವ್ಯಕ್ತಿಗಳ ಮೂಲಕ ಘಟನೆಯನ್ನು ವಿವರಿಸುವ ಲೇಖಕರ ತಂತ್ರಗಾರಿಕೆ ಚೆನ್ನಾಗಿದೆ ಎಂದು ನುಡಿದರು.

ಕೃತಿಕಾರ ಎಂ.ಎಸ್.ರಾಘವೇಂದ್ರ ಉಪಸ್ಥಿತರಿದ್ದರು.
ಮತ್ತಷ್ಟು
ಹಿಂದಿ ಸಾಹಿತ್ಯ ಅಕಾಡೆಮಿ ಸ್ಥಾಪನೆಗೆ ರಾಜ್ಯಪಾಲರ ಒಲವು
ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಹೊರಟ್ಟಿ
ಜನ ಮೆಚ್ಚುವ ಕೆಲಸ ಭಗವಂತನಿಗೂ ಇಷ್ಟ: ಪೇಜಾವರ ಶ್ರೀ
ಸಾಹಿತ್ಯ ಸಮ್ಮೇಳನಕ್ಕೆ ಪರ್ಯಾಯವಲ್ಲ: ಜಿ.ರಾಮಕೃಷ್ಣ
ಪ್ರಕಾಶ್ ಮನವೊಲಿಕೆ ಯತ್ನ ವಿಫಲ
ಬಿಎಸ್ಪಿಯತ್ತ ರಾಜಶೇಖರಮೂರ್ತಿ ಚಿತ್ತ