ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜೆಡಿಎಸ್‌ನಲ್ಲಿ ಮುಂದುವರೆದ ಚೆಲುವರಾಯಸ್ವಾಮಿ
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಡೆಸಿದ ಸಂಧಾನ ಫಲ ನೀಡಿದ್ದು ಬಂಡಾಯವೆದ್ದಿದ್ದ ಚೆಲುವರಾಯಸ್ವಾಮಿ ಬಣ ಜೆಡಿಎಸ್‌ನಲ್ಲಿಯೇ ಉಳಿಯುವಂತಾಗಿದೆ.

ಈ ಹಿಂದೆ ಕೊಂಚ ಅಸಮಾಧಾನಗೊಂಡು ಎಂ.ಪಿ.ಪ್ರಕಾಶ್‌ರೊಂದಿಗೆ ಗುರುತಿಸಿಕೊಂಡಿದ್ದ ಚೆಲುವರಾಯಸ್ವಾಮಿ ಬಣ ಪಕ್ಷ ಬಿಡಲಿದೆ ಎಂದೇ ಲೆಕ್ಕಾಚಾರ ಹಾಕಲಾಗಿತ್ತು.

ಇರಬಹುದಾದ ಚಿಕ್ಕಪುಟ್ಟ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಂಡು ಜೆಡಿಎಸ್ ವರಿಷ್ಠ ದೇವೇಗೌಡರು ಹಾಗೂ ಕುಮಾರಸ್ವಾಮಿ ನೇತೃತ್ವದಲ್ಲಿ ಪಕ್ಷದ ಬಲವರ್ಧನೆಗೆ ಶ್ರಮಿಸುವುದಾಗಿ ಈ ಬಣ ಹೇಳಿಕೆ ನೀಡಿದೆ.

ಪಕ್ಷದಿಂದ ದೂರವಿದ್ದಷ್ಟು ಕಾಲವೂ ತಾವು ಯಾವ ನಾಯಕರ ವಿರುದ್ಧವೂ ಹೋರಾಟ ನಡೆಸಿಲ್ಲ. ಪ್ರಕಾಶ್‌ರವರ ಮನವೊಲಿಕೆಗಾಗಿ ಪ್ರಯತ್ನಿಸಲಾಗುತ್ತಿದೆ. ಅವರು ಪಕ್ಷದಲ್ಲಿಯೇ ಉಳಿಯುತ್ತಾರೆ ಎಂಬ ವಿಶ್ವಾಸ ತಮ್ಮದು ಎಂದು ಚೆಲುವರಾಯಸ್ವಾಮಿ ತಿಳಿಸಿದ್ದಾರೆ.
ಮತ್ತಷ್ಟು
ಕಾಂಗ್ರೆಸ್‌ಗೆ ಜನಬೆಂಬಲ: ಖರ್ಗೆ
ಎಲ್ಲ ಮಾಜಿ ಶಾಸಕರಿಗೂ ಟಿಕೆಟ್: ದೇವೇಗೌಡ
ಹೋಟೆಲ್ ಉದ್ಯಮದ ಸಾಧಕರಿಗೆ ಆತಿಥ್ಯರತ್ನ ಪ್ರಶಸ್ತಿ ಪ್ರದಾನ
ರಾಜಕೀಯ ಮರು ವ್ಯಭಿಚಾರ: ಎ.ಕೆ.ಸುಬ್ಬಯ್ಯ
ಹಿಂದಿ ಸಾಹಿತ್ಯ ಅಕಾಡೆಮಿ ಸ್ಥಾಪನೆಗೆ ರಾಜ್ಯಪಾಲರ ಒಲವು
ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಹೊರಟ್ಟಿ