ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಕ್ಷರ ದಾಸೋಹಕ್ಕೆ ಅನ್ನ ದಾಸೋಹದ ಊರು ಸಜ್ಜು
ಉಡುಪಿ ಎಂದ ಕೂಡಲೆ ನೆನಪಿಗೆ ಬರುವುದು ಉಡುಪಿ ಕೃಷ್ಣ ಹಾಗೂ ಉಡುಪಿ ಹೋಟೆಲು. ಒಂದು ಆಧ್ಯಾತ್ಮದ ಹಸಿವನ್ನು ತಣಿಸುವ ತಾಣವಾದರೆ ಮತ್ತೊಂದು ಜಠರದ ಹಸಿವನ್ನು ತಣಿಸುವ ತಾಣ. ಇವೆರಡರ ಜೊತೆಗೆ ಸಾಹಿತ್ಯದ ಹಸಿವನ್ನೂ ತಣಿಸಹೊರಡುವ ಮೂಲಕ ಉಡುಪಿ ದಾಸೋಹದ ಹ್ಯಾಟ್ರಿಕ್ ಸಾಧಿಸಲಿದೆ ಎಂದು ಹೇಳಬಹುದು.

ಸಾಹಿತ್ಯ ಸಮ್ಮೇಳನ ಎಂದರೆ ಅದೊಂದು ಜಾತ್ರೆ ಎಂದು ಪಂಡಿತರೂ ಪಾಮರರೂ ಭಾವಿಸುವುದು ಕ್ಲೀಷೆ ಎನ್ನಿಸುವ ಮಟ್ಟಿಗೆ ಸಾಮಾನ್ಯವಾಗಿ ಹೋಗಿದೆ. ಈ ಹಿನ್ನೆಲೆಯಲ್ಲಿ 74ನೇ ಸಾಹಿತ್ಯ ಸಮ್ಮೇಳನವನ್ನು ಅಭೂತಪೂರ್ವ ಎನ್ನಿಸುವಷ್ಟರ ಮಟ್ಟಿಗೆ ವಿಶಿಷ್ಟವಾಗಿಸಲು ಶ್ರಮಪಡುತ್ತಿರುವುದು ಕಂಡುಬರುತ್ತಿದೆ.

ಈ ಸಮ್ಮೇಳನ ನಡೆಯಲಿರುವುದು ಕುಂಜಿಬೆಟ್ಟುವಿನ ಎಂ.ಜಿ.ಎಂ. ಕಾಲೇಜಿನ ಆರೂರು ಲಕ್ಷ್ಮೀನಾರಾಯಣರಾವ್ ಸ್ಮಾರಕ ಕ್ರೀಡಾಂಗಣದಲ್ಲಿ. ಅಂತೆಯೇ ಇದನ್ನು ಸಂಪರ್ಕಿಸುವ ಎಲ್ಲ ರಸ್ತೆಗಳು ತಮ್ಮ ಅಂದವನ್ನು ಹೆಚ್ಚಿಸಿಕೊಳ್ಳುತ್ತಿರುವುದು ವಿಶೇಷ. ಸಮ್ಮೇಳನಕ್ಕೆ ಬರುವವರಿಗೆ ಸ್ವಾಗತ ಕೋರಲೆಂದು ಪಟ್ಟಣದ ಎಲ್ಲೆಡೆ ಬ್ಯಾನರ್ಗಳನ್ನು ಕಟ್ಟಲಾಗಿದ್ದರೆ, ಖಾಸಗಿ ವಾಹನಗಳು, ಅಂಗಡಿ-ಮಳಿಗೆಗಳು ಬಾವುಟಗಳಿಂದ ಶೋಭಿತವಾಗಿವೆ.

ಸಮ್ಮೇಳನದ ಸಮಯದಲ್ಲಿ ರಾಜ್ಯದ ಸುಮಾರು 150 ಹಿರಿಯ ಮತ್ತು ಉದಯೋನ್ಮುಖ ಕಲಾವಿದರ ವರ್ಣಚಿತ್ರಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ. ಶಿಪಾಂಚಜನ್ಯಷಿ ಎಂಬ ಹೆಸರು ಹೊತ್ತ ಕನ್ನಡ ಭುವನೇಶ್ವರಿಯ ಪ್ರಚಾರ ರಥಯಾತ್ರೆ ಜಿಲ್ಲೆಯ ಊರೂರಿಗೂ ತೆರಳಿ ಸಾಹಿತ್ಯ ಪ್ರೇಮಿಗಳಿಗೆ ಸಮ್ಮೇಳನದ ಕುರಿತು ಮಾಹಿತಿ ನೀಡುತ್ತಿದೆ.

ಉಡುಪಿ ಸುತ್ತಮುತ್ತಲ ಪ್ರದೇಶದ ರಸ್ತೆಗಳು ಹದಗೆಟ್ಟಿದ್ದು ಸಾಹಿತ್ಯ ಸಮ್ಮೇಳನ ಮುಂದೂಡುವಂತಾಗಲು ಕಾರಣವಾಗಿತ್ತು. ಈಗ ಅವೆಲ್ಲ ದುರಸ್ತಿಯಾಗಿರುವುದಲ್ಲದೆ, ಕುಡಿಯುವ ನೀರಿನ ಸೌಕರ್ಯವನ್ನು ಒದಗಿಸುವ ಕಾರ್ಯ ಭರದಿಂದ ಸಾಗಿದೆ. ಒಟ್ಟಿನಲ್ಲಿ ಸಮ್ಮೇಳನದ ಸಂಭ್ರಮಕ್ಕೆ ಉಡುಪಿ ನವವಧುವಿನಂತೆ ಸಿಂಗರಿಸಿಕೊಂಡಿದೆ ಎನ್ನಬಹುದು.
ಮತ್ತಷ್ಟು
ಅತಿಥಿ ಸತ್ಕಾರಕ್ಕೆ ಆತಿಥ್ಯ ರತ್ನರ ಊರು ಸಜ್ಜು
ಸಾಹಿತ್ಯ ಸಮ್ಮೇಳನ: ಏನೈತಿ...ಅಂಥಾದ್ದೇನೈತಿ....?!!
ಜೆಡಿಎಸ್‌ನಲ್ಲಿ ಮುಂದುವರೆದ ಚೆಲುವರಾಯಸ್ವಾಮಿ
ಕಾಂಗ್ರೆಸ್‌ಗೆ ಜನಬೆಂಬಲ: ಖರ್ಗೆ
ಎಲ್ಲ ಮಾಜಿ ಶಾಸಕರಿಗೂ ಟಿಕೆಟ್: ದೇವೇಗೌಡ
ಹೋಟೆಲ್ ಉದ್ಯಮದ ಸಾಧಕರಿಗೆ ಆತಿಥ್ಯರತ್ನ ಪ್ರಶಸ್ತಿ ಪ್ರದಾನ