ಮಂಡ್ಯ: ಮಂಡ್ಯ ನಗರಸಭಾ ಸದಸ್ಯ ಜಡೇಜಾ ರವಿ ಹತ್ಯೆಗೆ ಪ್ರತಿಯಾಗಿ ತೀವ್ರ ಹಲ್ಲೆಗೊಳಗಾಗಿದ್ದ ಪ್ರತಿಷ್ಠಿತ ಗುತ್ತಿಗೆದಾರ ಹಾಗೂ ಕಾಂಗ್ರೆಸ್ ಸದಸ್ಯ ನಾಗೇಂದ್ರ ಮೃತಪಟ್ಟಿದ್ದಾರೆ.
ಮೈಸೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಬೆಳಗ್ಗೆ ಸುಮಾರು 8.45 ಗಂಟೆಗೆ ಮೃತಪಟ್ಟರೆಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಮಂಡ್ಯ ತೀವ್ರ ಪ್ರಕ್ಷುಬ್ಧಗೊಂಡಿದ್ದು ಅಘೋಷಿತ ಬಂದ್ ಸ್ವರೂಪ ತಾಳಿದೆ. ನಾಗೇಂದ್ರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅವರ ಹುಟ್ಟೂರು ಹನಕೆರೆಯಲ್ಲಿ ಹಾಗೂ ಮಂಡ್ಯ ಪಟ್ಟಣದಲ್ಲಿ ಅವರ ಬೆಂಬಲಿಗರು ಪ್ರತಿಭಟನೆಗೆ ಮುಂದಾಗಿದ್ದುದರಿಂದ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ರತಿಭಟನೆಗೆ ಬೆಂಬಲಿಗರು ರಸ್ತೆಗಿಳಿದಿದ್ದರಿಂದ ಬೆಂಗಳೂರು-ಮೈಸೂರು ರಸ್ತೆಯಲ್ಲಿ ತೀವ್ರ ಸಂಚಾರ ವ್ಯತ್ಯಯ ಉಂಟಾಗಿತ್ತು ಎಂದು ತಿಳಿದುಬಂದಿದೆ.
|