ಅಕ್ರಮ-ಸಕ್ರಮದ ಬಗ್ಗೆ ಎದ್ದಿರುವ ವಿವಾದದ ನಡುವೆ ಬೆಂಗಳೂರಿನ ಖಾಸಗಿ ವಸತಿ ಮತ್ತು ವಾಣಿಜ್ಯ ನಿವೇಶನಗಳಲ್ಲಿ ಶೇ.50ರಷ್ಟು ಕಟ್ಟಡಗಳು ಆಸ್ತಿತೆರಿಗೆಗೆ ಮೌಲ್ಯಮಾಪನ ಮಾಡಿಲ್ಲದಿರುವುದರಿಂದ ಅವು ಅಕ್ರಮ ಕಟ್ಟಡಗಳು ಎಂದು ಅಧಿಕೃತ ದಾಖಲೆಗಳು ಹೇಳುತ್ತಿವೆ.
ಸಕ್ರಮ ಯೋಜನೆಗೆ ಗಡುವು ಸಮೀಪಿಸುತ್ತಿದ್ದಂತೆ ಪ್ರತಿಕ್ರಿಯೆ ಮಾತ್ರ ನೀರಸವಾಗಿದೆ. ಶಾಸನಕ್ಕೆ ತಿದ್ದುಪಡಿ ಮಾಡುವ ಮೂಲಕ ಮಾತ್ರ ಇದರಲ್ಲಿ ಬದಲಾವಣೆ ಮಾಡಬಹುದೆಂದು ಹೇಳಲಾಗಿದೆ. ಆದರೆ ಅಧಿಕಾರಿಗಳು ಕಾನೂನು ಮತ್ತು ನಗರಾಭಿವೃದ್ಧಿ ಸಚಿವಾಲಯವನ್ನು ಸಂಪರ್ಕಿಸಬೇಕಿರುವುದರಿಂದ ಇದು ಬಹಳ ಸಮಯ ಹಿಡಿಯುತ್ತದೆ ಎನ್ನಲಾಗಿದೆ.
ಸಕ್ರಮ ಯೋಜನೆ ಆರಂಭಕ್ಕೆ ಮುನ್ನ ವಿವಿಧ ಇಲಾಖೆಗಳು ಕೈಗೊಂಡ ಸಮೀಕ್ಷೆ ಪ್ರಕಾರ ಬಿಬಿಎಂಪಿ ವ್ಯಾಪ್ತಿಗೆ ಬರುವ 13.84 ಲಕ್ಷ ಖಾಸಗಿ ಆಸ್ತಿದಾರರಲ್ಲಿ 6.16 ಲಕ್ಷ ಆಸ್ತಿಗಳನ್ನು ಮಾತ್ರ ಆಸ್ತಿತೆರಿಗೆಗೆ ಮೌಲ್ಯಮಾಪನ ಮಾಡಲಾಗಿದೆಯೆಂದು ತಿಳಿದುಬಂದಿದೆ. ಸಕ್ರಮ ಯೋಜನೆ ಅಡಿಯಲ್ಲಿ ಅನಧಿಕೃತ ಕಟ್ಟಡಗಳು 6 ಲಕ್ಷವೆಂದು ಅಂದಾಜು ಮಾಡಲಾಗಿದೆ.
|