ಜೆಡಿಎಸ್ ಮುಖಂಡ ಎಂ.ಪಿ. ಪ್ರಕಾಶ್ ಕಾಂಗ್ರೆಸ್ಗೆ ಬರುವುದಾದರೆ ಅವರಿಗೆ ಸ್ವಾಗತವಿದೆ ಎಂದು ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಈ ಕುರಿತು ಪ್ರಕಾಶ್ ತಮ್ಮ ಇಂಗಿತ ವ್ಯಕ್ತಪಡಿಸಿದರೆ ಅವರ ಸೇರ್ಪಡೆಗೆ ಸಂಬಂಧಿಸಿ ಪಕ್ಷದ ಹೈಕಮಾಂಡ್ ಜೊತೆ ಚರ್ಚಿಸುವುದಾಗಿ ತಿಳಿಸಿದ್ದಾರೆ.
ರಾಜ್ಯದ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಹೊತ್ತಿರುವ ಪೃಥ್ವೀರಾಜ್ ಚವ್ಹಾಣ್ ರಾಜ್ಯಕ್ಕೆ ಮೂರುದಿನಗಳ ಭೇಟಿ ನೀಡಲಿದ್ದಾರೆ. ಪಕ್ಷ ಸಂಘಟನೆಯ ಕುರಿತು ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗೆಗೆ ಅವರು ಚರ್ಚಿಸಲಿದ್ದಾರೆ ಎಂದು ಧರಂ ಈ ಸಂದರ್ಭದಲ್ಲಿ ತಿಳಿಸಿದರು.
ಚುನಾವಣೆ ಮುಂದೂಡುವ ಸಂಬಂಧ ಕಾಂಗ್ರೆಸ್ ಪಕ್ಷ ರಾಜ್ಯಪಾಲರಿಗೆ ಯಾವುದೇ ಒತ್ತಡವನ್ನು ಹೇರಿಲ್ಲ. ಅಷ್ಟಕ್ಕೂ ಚುನಾವಣಾ ದಿನಾಂಕವನ್ನು ನಿಗದಿಪಡಿಸುವುದು ಚುನಾವಣಾ ಆಯೋಗವೇ ಹೊರತು ಕೇಂದ್ರ ಸರ್ಕಾರವಲ್ಲ. ವಿದ್ಯಾರ್ಥಿಗಳ ಪರೀಕ್ಷಾ ದಿನಾಂಕಗಳನ್ನು ಗಮನದಲ್ಲಿಟ್ಟುಕೊಂಡು ಇತರ ಸಾಧಕ ಬಾಧಕಗಳನ್ನು ಅವಲೋಕಿಸಿ ಆಯೋಗ ಈ ದಿನಾಂಕವನ್ನು ನಿರ್ಧರಿಸುತ್ತದೆ ಎಂದು ಧರಂಸಿಂಗ್ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
|