ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಂಗಳೂರು:ಕಟ್ಟಡ ಕುಸಿತಕ್ಕೆ 8 ಸಾವು
ಬೆಂಗಳೂರಿನ ಭಾರತೀನಗರದಲ್ಲಿರುವ ನೆಹರೂಪುರದಲ್ಲಿ ಮಂಗಳವಾರ ರಾತ್ರಿ ಕಟ್ಟಡವೊಂದು ಕುಸಿದು ಬಿದ್ದ ಪರಿಣಾಮವಾಗಿ ಎಂಟು ಮಂದಿ ಮೃತಪಟ್ಟಿದ್ದು, 18ಕ್ಕೂಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

20 ವರ್ಷಗಳ ಹಿಂದೆ ನಿರ್ಮಿಸಿದ್ದ ಈ ಕಟ್ಟದಲ್ಲಿನ ಮೂರು ಬ್ಲಾಕ್‌ಗಳ ಮದ್ಯದ ಬ್ಲಾಕ್‌ನಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ಹರೂನಿ ಕುಟುಂಬ ವಾಸವಾಗಿದ್ದು, ಹರೂನ್ ಅವರ ಮಗಳ ಮದುವೆ ಶುಕ್ರವಾರದಂದು ನಿಗದಿಯಾಗಿತ್ತು. ಈ ಸಂದರ್ಭದಲ್ಲಿ ಮನೆಯಲ್ಲಿ 50ಕ್ಕೂ ಹೆಚ್ಚು ಸಂಬಂಧಿಕರು ಆಗಮಿಸಿದ್ದರು.

ಮೊದಲೇ ಶಿಥಿಲಗೊಂಡಿದ್ದ ಮನೆ ಅಷ್ಟು ಜನರ ಭಾರ ತಾಳಲಾರದೆ ಕುಸಿದು ಬಿದ್ದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.ಘಟನೆಯಲ್ಲಿ ಸಮೀರ್ ಜಮಾಲ್ ಷರೀಫ್(35), ಇವರ ಮಗ ಫೈಜಾನ್ ಷರೀಫ್(2), ರಿಹಾನ್(16), ಮಹಮ್ಮದ್(25), ಸಲ್ಮಾ(38), ತಸ್ಲೀಮಾ ಬಾನು(32), ಸುಲ್ತಾನಾ ಬೇಗಂ(30) ಮೃತಪಟ್ಟಿದ್ದು, ವಿಡಿಯೋಗ್ರಾಫರ್ ಇಸ್ಮಾಯಿಲ್ ಕೂಡ ಸಾವನ್ನಪ್ಪಿರುವುದಾಗಿ ಶಂಕಿಸಲಾಗಿದೆ.ಅಲ್ಲದೆ, ಅಲ್ಮಾಸ್ ತಾಜ್(13), ಹರ್ಷಾ ತಾಜ್(11), ದಿಲ್ಸದ್ ಬೇಗಂ(32), ಅಯಾಝಬಿ(13), ಜಾನ್ ಬರ್ನಾಡ್(29), ಅಬಿದಾ ಬೇಗಂ(50), ಅಜರಾ ಖಾನ್(18) ಅವರು ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಗಳು ಪರಿಹಾರ ಕಾರ್ಯಾರಂಭಿಸಿ ಗಾಯಗೊಂಡವರನ್ನು ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು
ಪ್ರಕಾಶ್ ಕಾಂಗ್ರೆಸ್ಸಿಗೆ ಬರಲಿ: ಧರ್ಮಸಿಂಗ್
ಜೆಡಿಎಸ್‌ನಲ್ಲಿ ಇರಲಾರೆ: ಪ್ರಕಾಶ್
ರೈತ ಆತ್ಮಹತ್ಯೆ: ಬ್ಯಾಂಕಿನೆದುರು ಪ್ರತಿಭಟನೆ
ಬೆಂಗಳೂರಿನಲ್ಲಿ 5.5 ಲಕ್ಷ ಅಕ್ರಮ ಆಸ್ತಿಗಳು
ನಾಗೇಂದ್ರ ಸಾವು: ಪ್ರತೀಕಾರದ ಬೇಗುದಿಯಲ್ಲಿ ಮಂಡ್ಯ
ನಾಗೇಂದ್ರ ಸಾವು: ಮಂಡ್ಯ ಪ್ರಕ್ಷುಬ್ಧ