ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಂಭ್ರಮದ ಸಮ್ಮೇಳನಕ್ಕೆ ವಿಧ್ಯುಕ್ತ ಧ್ವಜಾರೋಹಣ
ರಾಜ್ಯದಲ್ಲಿ ರಾಷ್ಟ್ತ್ರಪತಿ ಆಡಳಿತವಿರುವ ಹಿನ್ನೆಲೆಯಲ್ಲಿ ಸಾಹಿತ್ಯ ಸಮ್ಮೇಳನ ರಾಜಕಾರಣಿಗಳಿಂದ ಮುಕ್ತವಾಗಿದ್ದುದು ಕಂಡುಬಂತು.

ರಾಜ್ಯದ ಎಲ್ಲಡೆಯಿಂದ ಬಂದಿದ್ದ ಅಭಿಮಾನಿಗಳ ಸಂಭ್ರಮದ ಮಧ್ಯದಲ್ಲಿ ವಿಧ್ಯುಕ್ತವಾಗಿ ಕನ್ನಡ ಧ್ವಜ, ಪರಿಷತ್ ಧ್ವಜ ಹಾಗೂ ರಾಷ್ಟ್ತ್ರಧ್ವಜಗಳ ಧ್ವಜಾರಾಹಣವನ್ನು ಕೈಗೊಳ್ಳಲಾಯಿತು. ರಾಜ್ಯಪಾಲ ರಾಮೇಶ್ವರ ಠಾಕೂರ್, ಸಮ್ಮೇಳನಾಧ್ಯಕ್ಷ ಎಲ್.ಎಸ್.ಶೇಷಗಿರಿರಾವ್ ಹಾಗೂ ಮಾಜಿ ಸಚಿವ ವಿ.ಎಸ್.ಆಚಾರ್ಯ ಇದರಲ್ಲಿ ಭಾಗವಹಿಸಿದ್ದರು.

ರಾಷ್ಟ್ತ್ರಕವಿ ಕುವೆಂಪು ವಿರಚಿತ ಜೈ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ ಗೀತೆಯನ್ನು ಪ್ರಾರ್ಥನೆಯಾಗಿ ಹಾಡಿದ್ದು ಸಮ್ಮೇಳನಕ್ಕೆ ಕಳೆಕೊಟ್ಟಿತು.

ಉದ್ಘಾಟನೆಗೂ ಮುನ್ನ ನಡೆದ ತಾಯಿ ಭುವನೇಶ್ವರಿಯ ಮೆರವಣಿಗೆಯಲ್ಲಿ ಉಡುಪಿ ಮಠದ ಆನೆ, ಹಲವಾರು ಸ್ತಬ್ದ ಚಿತ್ರಗಳು, ಕಂಬಳದ ಕೋಣ, ಚಂಡೆ-ಮದ್ದಳೆ ವಾದ್ಯ ಸಂಭ್ರಮಗಳು ಸೇರಿ ಸಮ್ಮೇಳನಕ್ಕೆ ಬಂದಿದ್ದವರಿಗೆ ಮುದ ನೀಡಿತು.

ಸಮ್ಮೇಳನದ ಪ್ರಚಾರಕ್ಕಾಗಿ ಹೈಟೆಕ್ ಮಾಧ್ಯಮ ಕೇಂದ್ರದ ವ್ಯವಸ್ಥೆ ಮಾಡಿರುವುದು ಇಲ್ಲಿನ ಮತ್ತೊಂದು ವಿಶೇಷ. ಕೊರೆವ ಚಳಿಯಲ್ಲಿ ಊರೂರಿಂದ ಆಗಮಿಸಿದ್ದ ಪ್ರತಿನಿಧಿಗಳು ನೋಂದಾಯಿಸಿಕೊಳ್ಳುತ್ತಿದ್ದುದು ಸಮ್ಮೇಳನದ ಮಹತ್ವವನ್ನು ಸಾರಿ ಹೇಳುತ್ತಿತ್ತು.
ಮತ್ತಷ್ಟು
ಸಮ್ಮೇಳನಕ್ಕೆ ನಿಸಾರ್ ಗೈರುಹಾಜರು
ಕನ್ನಡದ ನುಡಿಜಾತ್ರೆಗೆ ಅದ್ದೂರಿಯ ಚಾಲನೆ
ದುರ್ದೈವಿಗಳ ಕುಟುಂಬಕ್ಕೆ ರಾಜ್ಯಪಾಲರಿಂದ ಪರಿಹಾರ ಘೋಷಣೆ
ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ : ಯಶವಂತ್ ಸಿನ್ಹಾ
ಬೆಂಗಳೂರು:ಕಟ್ಟಡ ಕುಸಿತಕ್ಕೆ 8 ಸಾವು
ಪ್ರಕಾಶ್ ಕಾಂಗ್ರೆಸ್ಸಿಗೆ ಬರಲಿ: ಧರ್ಮಸಿಂಗ್