ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಡುಪಿ ಸಾಹಿತ್ಯ ಸಮ್ಮೇಳನ : ಒಂದಷ್ಟು ವಿಶೇಷತೆಗಳು
ಅಚ್ಚುಕಟ್ಟಾದ ಆಸನ ವ್ಯವಸ್ಥೆ, ಪುಸ್ತಕ ಮೇಳ-ಜಾನಪದ ಮೇಳಗಳ ಆಯೋಜನೆ, ಆಹಾರ ವಿತರಣೆಗೆಂದೇ 25 ಪ್ರತ್ಯೇಕ ಕೌಂಟರ್‌ಗಳು ಈ ಸಮ್ಮೇಳನದ ವಿಶೇಷವಾಗಿದೆ.

ಆಹಾರ ವಿತರಣೆಯ ವ್ಯವಸ್ಥೆಯಲ್ಲಿ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ಹೊರಗಿಟ್ಟಿರುವುದು ಪ್ರತಿನಿಧಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಎಲ್ಲ ಸುಸೂತ್ರವಾಗಿ ನಡೆಯುತ್ತಿದ್ದರೂ ನಕ್ಸಲ್‌ಗಳಿಂದ ಆತಂಕ ಒದಗದಿರಲಿ ಎಂಬ ಉದ್ದೇಶದಿಂದ ಸೂಕ್ತ ಭದ್ರತೆ ಒದಗಿಸಲಾಗಿದೆ ಎಂದು ಪಶ್ಚಿಮ ವಲಯದ ಐಜಿಪಿ ಎ.ಎಂ.ಪ್ರಸಾದ್ ತಿಳಿಸಿದ್ದಾರೆ.

ಖ್ಯಾತ ವ್ಯಂಗ್ಯ ಚಿತ್ರಕಾರ ಪ್ರಕಾಶ್ ಶೆಟ್ಟಿಯವರ ವ್ಯಂಗ್ಯಚಿತ್ರಗಳ ಕೌಂಟರ್ ಸಮ್ಮೇಳನದ ಮತ್ತೊಂದು ಆಕರ್ಷಣೆ. ಅದರಲ್ಲೂ ಸ್ವಾಗತ ಸಮಿತಿಯವರ ಟೇಬಲ್ ಮುಂದೆ ನಿಂತು ಎಲ್.ಎಸ್.ಶೇಷಗಿರಿರಾಯರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುತ್ತಿರುವುದು; ಈ ಕುರಿತು, ಯಾರೋ ಶೇಷಗಿರಿರಾಯರಂತೆ ಅಂತ ಸ್ವಾಗತ ಸಮಿತಿಯ ಆ ಡೆಸ್ಕ್‌ನಲ್ಲಿ ಕುಳಿತವರು ಗೊಣಗಿಕೊಳ್ಳುತ್ತಿರುವ ವ್ಯಂಗ್ಯಚಿತ್ರ ಎಲ್ಲರ ಕಣ್ಮಣಿಯಾಗಿದೆ.
ಮತ್ತಷ್ಟು
ಸಂಭ್ರಮದ ಸಮ್ಮೇಳನಕ್ಕೆ ವಿಧ್ಯುಕ್ತ ಧ್ವಜಾರೋಹಣ
ಸಮ್ಮೇಳನಕ್ಕೆ ನಿಸಾರ್ ಗೈರುಹಾಜರು
ಕನ್ನಡದ ನುಡಿಜಾತ್ರೆಗೆ ಅದ್ದೂರಿಯ ಚಾಲನೆ
ದುರ್ದೈವಿಗಳ ಕುಟುಂಬಕ್ಕೆ ರಾಜ್ಯಪಾಲರಿಂದ ಪರಿಹಾರ ಘೋಷಣೆ
ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ : ಯಶವಂತ್ ಸಿನ್ಹಾ
ಬೆಂಗಳೂರು:ಕಟ್ಟಡ ಕುಸಿತಕ್ಕೆ 8 ಸಾವು