ರವಿಶಂಕರ ಬೆಟ್ಟಂಪಾಡಿ
ಉಡುಪಿ: ಶಿವರಾಮ ಕಾರಂತ ಮಹಾ ಮಂಟಪ, ಎಂ.ಗೋಪಾಲಕೃಷ್ಣ ಅಡಿಗ ಪ್ರಧಾನ ವೇದಿಕೆ,
ಜಗತ್ತಿನ ಇನ್ನೂರು ವಿಶ್ವ ವಿದ್ಯಾಲಯಗಳ ಸಾಲಿನಲ್ಲಿ ದೇಶದ ಒಂದೇ ಒಂದೂ ವಿಶ್ವ ವಿದ್ಯಾಲಯಗಳೂ ಇಲ್ಲ, ಇದು 74ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಪ್ರೊ.ಎಲ್.ಎಸ್.ಶೇಷಗಿರಿ ರಾವ್ ಅವರ ನೋವು.
ವಿಶ್ವ ವಿದ್ಯಾಲಯಗಳ ಗುಣಮಟ್ಟ ಸುಧಾರಿಸಿ ಕರ್ನಾಟಕ ವಿಶ್ವ ವಿದ್ಯಾಲಯಗಳನ್ನು ಜಾಗತಿಕ ಮಟ್ಟದಲ್ಲಿ ಏರುವ ಸಂಕಲ್ಪವನ್ನು ಸರ್ಕಾರ ಮತ್ತು ವಿಶ್ವ ವಿದ್ಯಾಲಯಗಳು ಮಾಡಬೇಕು. ಸರ್ಕಾರ ಹಣ ಸಹಾಯವನ್ನು ನೀಡಬೇಕು. ವಿ.ವಿಗಳಲ್ಲಿ ಉನ್ನತಮಟ್ಟದ ಸಂಶೋಧನೆಗಳು ನಡೆಯಬೇಕು. ಉನ್ನತ ಮಟ್ಟದ ವಿದ್ವತ್ ಪೂರ್ಣ ಪ್ರಬಂಧಗಳನ್ನು ಹೊರತರಬೇಕು. ವಿಶ್ವ ವಿದ್ಯಾಲಯಗಳ ಸಿಂಡಿಕೇಟ್ ಮುಂತಾದ ಸಂಸ್ಥೆಗಳಿಗೆ ಶಿಕ್ಷಣ ಕ್ಷೇತ್ರದೊಡನೆ ಸಂಬಂಧ ವಿರುವವರನ್ನು ಮಾತ್ರವೇ ನೇಮಿಸಬೇಕು ಎಂದು ಸಲಹೆ ಮಾಡಿದರು.
ಇದಕ್ಕೆ ಪೂರಕವಾಗಿ ಪ್ರಾಥಮಿಕ ಶಾಲೆಯ ಸ್ಥಿತಿ ಸುಧಾರಣೆಯಾಗಬೇಕು. ಕನ್ನಡ ಕಲಿಕೆ ಕೇಂದ್ರೀಯ ಶಾಲೆಗಳಲ್ಲಿ ಕಡ್ಡಾಯವಾಗಬೇಕು. ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಕಡ್ಡಾಯ ಶೌಚಾಲಯ ನಿರ್ಮಾಣ, ಓದಲು ಅನುಕೂಲವಾಗುವಂತಹ ಕಟ್ಟಡ ವಿದ್ಯಾರ್ಥಿಗಳ ಅನಿವಾರ್ಯತೆ. ಸಕಾರೀ ಶಾಲೆಗಳಲ್ಲಿ ಈ ಎಲ್ಲಾ ಸೌಲಭ್ಯ ಸಿಕ್ಕಾಗ ಪೋಷಕರಿಗೂ ತಮ್ಮ ಮಕ್ಕಳನ್ನು ಅಲ್ಲಿಗೆ ಕಳುಹಿಸಲು ಖುಷಿಯೆನಿಸುತ್ತದೆ ಎಂದಿದ್ದಾರೆ.
ಕನ್ನಡ ಕಡ್ಡಾಯ : ಕನ್ನಡ ನಾಡಿನಲ್ಲಿ ಯಾವುದೇ ಉದ್ಯೌಗ ಪಡೆಯಲು ಕನ್ನಡವೇ ಕಡ್ಡಾಯವಾಗಬೇಕು. ಕನ್ನಡ ಅನ್ನ ಕೊಡಬಲ್ಲ ಭಾಷೆಯಾಗಬೇಕು. ಅದು ಶಿಕ್ಷಣದ ಮಾಧ್ಯಮವಾಗಬೇಕು. ಇಂಗ್ಲಿಷ್ ಅನ್ನು ಮೊದಲಿನಿಂದಲೂ ಕಲಿಸುವುದಕ್ಕೆ ನನ್ನ ವಿರೋಧವಿದೆ. ಈಗಲೂ ಕೂಡ ಎಂದು ತಮ್ಮ ಏರು ದನಿಯಲ್ಲಿ ಹೇಳಿದರು. ಕನ್ನಡದಿಮದ ತೀರ ವಿಭಿನ್ನವಾದ ಇಂಗ್ಲಿಷ್ ಭಾಷೆಯನ್ನು ಕನ್ನಡದೊಮದಿಗೇ ಕಲಿಯುವಾಗ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ವಾಕ್ಯರಚನೆ ಗೊಂದಲಕ್ಕೆ ಕಾರಣವಾಗುತ್ತದೆ ಎಂಬುದನ್ನು ಉದಾಹರಣೆಯೊಂದಿಗೆ ವ್ಯಾಖ್ಯಾನಿಸಿದರು.
ಈ ನಿಟ್ಟಿನಲ್ಲಿ ಪ್ರಾಥಮಿಕ ತರಗತಿಯಿಂದ ಪದವಿ ಪೂರ್ವ ತರಗತಿಯವರೆಗೆ ಇಂಗ್ಲಿಷ್ ಬೋಧನೆಯ ವಿಷಯವನ್ನು ಸಮಗ್ರವಾಗಿ ಶಿಪಾರಸು ಮಾಡಲು ಇಂಗ್ಲಿಷ್ ಬೋಧನೆಯ ತಜ್ಞರಿರುವ ಸಮಿತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ರಚಿಸಬೇಕು. ಆಗ ಕನ್ನಡ ನಾಡಿನ ಇಡೀ ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡಕ್ಕೆ ಸಾರ್ವಭೌಮ ಸಿಗಲು ಸಾಧ್ಯ ಎಂದರು. ಬಾಲ್ಯವನ್ನು ಕಸಿದುಕೊಂಡಿದ್ದೇವೆ : ಮಕ್ಕಳ ಬಾಲ್ಯವನ್ನು ನಾವು ಕಸಿದುಕೊಂಡಿದ್ದೇವೆ. ಅರಳುವ ಮನಸ್ಸಿನ ಮೇಲೆ ಸ್ಫರ್ಧೆಯ ಬಮಡೆಯನ್ನು ಹೇರಿದ್ದೇವೆ. ದೊಡ್ಡ, ದೊಡ್ಡ ನಗರಗಳಲ್ಲಿ ಮಕ್ಕಳಿಗೆ ಆಟವಾಡಲು ಮೈದಾನಗಳೇ ಇಲ್ಲ. ಮಕ್ಕಳಲ್ಲಿ ನೀವು ಯಾವ ಆಟ ಆಡುತ್ತಿರಿ ಎಂದಾಗ ವೀಡಿಯೋಗೇಮ್ಸ್ ಅನ್ನುವ ಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಮಕ್ಕಳ ಮನಸ್ಸನ್ನು ಆರೋಗ್ಯಕರವಾಗಿ ರೂಪಿಸುವ ಸಂಸ್ತೆಯೊಮದರ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಸಮ್ಮೇಳನದ ಸ್ವಾರಸ್ಯಗಳು
• ಸಮ್ಮೇಳನಾಧ್ಯಕ್ಷ ಪ್ರೊ.ಎಲ್.ಎಸ್.ಶೇಷಗಿರಿ ರಾವ್ ಸುದೀರ್ಘ ಒಂದು ಗಂಟೆಗಳ ಕಾಲ ನಿರರ್ಗಳ ಭಾಷಣದಲ್ಲಿ 24 ಪುಟಗಳ ಮುದ್ರಿತ ಭಾಷಣವನ್ನು ಸುಲಲಿತವಾಗಿ ಓದಿದರು. ಕನ್ನಡ ಸಾಹಿತ್ಯ ಪರಿಷತ್ ಮುದಿಸಿದ್ದ ಭಾಷಣದ ಪ್ರತಿಯನ್ನು ಎಲ್ಲಾ ನೆರೆದಿದ್ದ ಸಾಹಿತ್ಯಾಭಿಮಾನಿಗಳಿಗೆ ವಿತರಿಸಲಾಯಿತು. • ಕರಾವಳಿ ಪ್ರದೇಶ ಉಡುಪಿಯಲ್ಲಿ ಸಮ್ಮೇಳನ ನಡೆಯುತ್ತಿರುವ ಹಿನ್ನೆಲೆಯಲ್ಲಿ ವೇದಿಕೆಯ ಹಿಂಭಾಗದಲ್ಲಿ ಬೋಟಿನ ಮಾದರಿಯನ್ನು ನಿರ್ಮಿಸಲಾಗಿದ್ದು ಇದು ಇಲ್ಲಿನ ಮೀನುಗಾರಿಕೆಯನ್ನು ಪ್ರತಿನಿಧಿಸಿದಂತಿತ್ತು. • ಅಪ್ಪಟ ಸಸ್ಯಾಹಾರಿ ಊಟದ ಸವಿಯನ್ನು 35 ಸಾವಿರಕ್ಕೂ ಹೆಚ್ಚು ಮಂದಿ ಅನುಭವಿಸಿದರು. • ಸಾರು, ಹುಳಿ, ಚಟ್ನಿ, ಉಪ್ಪಿನಕಾಯಿ, ಚಪಾತಿ, ಪಾಯಸ, ಲಡ್ಡು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. • ಕೆಲ ಮಳಿಗೆಗಳಲ್ಲಿ ಆಂಗ್ಲ ಬ್ಯಾನರ್ ತೂಗು ಹಾಕಿದ್ದಾರೆ ಎಂಬ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಕೆಲಕಾಲ ಗೊಂದಲ ಸೃಷ್ಟಿಸಿದರು. • ಕನ್ನಡದ ಬಹುತೇಕ ವಾಹಿನಿಗಳು ಸಮ್ಮೇಳನದ ಕ್ಷಣ, ಕ್ಷಣದ ಮಾಹಿತಿಯನ್ನು ನೀಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. • ಮಾಧ್ಯಮ ಪ್ರತಿನಿಧಿಗಳಿಗಾಗಿ ಸುಸಜ್ಜಿತ ಮಾಧ್ಯಮ ಕೇಂದ್ರ ಈ ಬಾರಿಯ ವಿಶೇಷ
|