ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
14 ಶಾಸಕರ ಗುಡ್‌ಬೈ: ದಳ ಈಗ ಮತ್ತೊಮ್ಮೆ ವಿದಳ
ಕರ್ನಾಟಕದಲ್ಲಿ ವಿಧಾನಸಭೆ ವಿಸರ್ಜನೆಯಾಗಿ ಕೆಲವೇ ದಿನಗಳಲ್ಲಿ, ಜೆಡಿ(ಎಸ್) ಮುಖ್ಯಸ್ಥ ದೇವೇಗೌಡ ಅವರ ಸುದೀರ್ಘ ಕಾಲದ ಸಹವರ್ತಿ ಎಂ.ಪಿ ಪ್ರಕಾಶ್ ಬಣ ಜೆಡಿ(ಎಸ್) ಸಂಬಂಧ ಕಡಿದುಕೊಳ್ಳುವ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದೆ.ಇವರೊಂದಿಗೆ ಹನ್ನೊಂದು ಮಂದಿ ಮಾಜಿ ಶಾಸಕರು ಮತ್ತು ಇಬ್ಬರು ವಿಧಾನ ಪರಿಷತ್ ಸದಸ್ಯರು ಕೂಡಾ ಜೆಡಿ(ಎಸ್) ತೊರೆಯುತ್ತಿದ್ದಾರೆ.

ಬುಧವಾರ ಸಂಜೆ ತಮ್ಮ ನಿವಾಸದಲ್ಲಿ ನಡೆದ ಸಮಾನ ಮನಸ್ಕ ಮಾಜಿ ಶಾಸಕ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಕಾಶ್, ನಮ್ಮ ಮುಂದೆ ಜೆಡಿ(ಯು), ಕಾಂಗ್ರೆಸ್, ಸಮಾಜವಾದಿ ಪಕ್ಷ, ಬಿಎಸ್‌ಪಿ ಮೊದಲಾದ ಪಕ್ಷಗಳನ್ನು ಸೇರುವ ಆಯ್ಕೆ ಇದೆ. ಯಾವ ಪಕ್ಷ ಸೇರಬೇಕೆನ್ನುವ ಕುರಿತಾಗಿ ಆದಷ್ಟು ಬೇಗನೇ ತೀರ್ಮಾನ ತೆಗೆದುಕೊಳ್ಳಲಾಗುವುದು. ಈ ಸಂಬಂಧ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಸಭೆ ನನಗೆ ಅಧಿಕಾರ ನೀಡಿದೆ ಎಂದು ಹೇಳಿದರು.

ಪ್ರಕಾಶ್ ಬಣದ ಅನೇಕರು ಕಾಂಗ್ರೆಸ್ ಸೇರಲು ಒಲವು ತೋರಿದ್ದರೂ, ಕೊನೆ ಗಳಿಗೆಯಲ್ಲಿ ಈ ಬಣ ಜೆಡಿ(ಯು) ಸೇರಿ ಎನ್‌ಡಿಎ ತೆಕ್ಕೆಗೆ ಬರುವ ಸಾಧ್ಯತೆಗಳನ್ನು ಕೂಡಾ ತಳ್ಳಿ ಹಾಕುವಂತಿಲ್ಲ ಎಂಬುದಾಗಿ ಮೂಲಗಳು ತಿಳಿಸಿವೆ.

ಪ್ರಕಾಶ್ ಬಣದಲ್ಲಿ ಈಗ ಮಾಜಿ ಶಾಸಕರಾದ ಮಹದೇವ ಪ್ರಸಾದ್, ರಾಜಣ್ಣ, ಬಿ.ಸಿ.ಪಾಟೀಲ್, ಶರಣ ಬಸಪ್ಪ ದರ್ಶನಾಪುರ, ಎಂ.ವೈ.ಪಾಟೀಲ್, ಅಮರೇಗೌಡ ಬಯ್ಯಾಪುರ, ಸೂರ್ಯನಾರಾಯಣ ರೆಡ್ಡಿ, ನರಸಿಂಹನಾಯಕ (ರಾಜುಗೌಡ), ಎಸ್.ಬಾಲರಾಜ್, ಎಚ್.ಆಂಜನೇಯ, ಸಂತೋಷ್ ಲಾಡ್, ವಿಧಾನ ಪರಿಷತ್ ಸದಸ್ಯರಾದ ಬಿ.ಟಿ.ಚನ್ನಬಸಪ್ಪ ಹಾಗೂ ಬಿ.ಚಿದಾನಂದ ಮೊದಲಾದವರು ಇದ್ದಾರೆ.
ಮತ್ತಷ್ಟು
ವಿವಿಗಳ ಗುಣಮಟ್ಟ ಸುಧಾರಣೆಗೆ ಸಮ್ಮೇಳನಾಧ್ಯಕ್ಷರ ಸಲಹೆ
ಅನ್ಯಾಯದ ವಿರುದ್ಧ ಕನ್ನಡಿಗರು ಮತ್ತೊಂದು ಹೋರಾಟ ಮಾಡಬೇಕೇ?: ಎಲ್ಎಸ್ಎಸ್ ಅಸಮಾಧಾನ
ಕನ್ನಡದ ಪರ ದನಿ ಎತ್ತುವ ಸಮರ್ಥ ನಾಯಕನಿಲ್ಲ: ಎಲ್ಎಸ್ಎಸ್
ಉಡುಪಿ ಸಾಹಿತ್ಯ ಸಮ್ಮೇಳನ : ಒಂದಷ್ಟು ವಿಶೇಷತೆಗಳು
ಸಂಭ್ರಮದ ಸಮ್ಮೇಳನಕ್ಕೆ ವಿಧ್ಯುಕ್ತ ಧ್ವಜಾರೋಹಣ
ಸಮ್ಮೇಳನಕ್ಕೆ ನಿಸಾರ್ ಗೈರುಹಾಜರು