ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಮ್ಮೇಳನದಲ್ಲಿಂದು ಜಾಗತೀಕರಣ ಗೋಷ್ಠಿ
ಕನ್ನಡಿಗ ಎರಡನೇ ದರ್ಜೆಯ ಪ್ರಜೆಯಾಗಲು ಯಾವುದೇ ಕಾರಣಕ್ಕೂ ಬಿಡಬಾರದು ಎಂದು ನಿನ್ನೆಯ ಅಧ್ಯಕ್ಷ ಭಾಷಣದಲ್ಲಿ ಎಲ್.ಎಸ್.ಶೇಷಗಿರಿರಾಯರು ಅಭಿಪ್ರಾಯ ವ್ಯಕ್ತಪಡಿಸಿದ ನಂತರ ಸಮ್ಮೇಳನದಲ್ಲಿನ ಇಂದಿನ ವಿಚಾರ ಗೋಷ್ಠಿಗಳನ್ನು ಎಲ್ಲರೂ ಕುತೂಹಲದಿಂದ ಎದಿರು ನೋಡುವಂತಾಗಿದೆ.

ಇಂದು ಹಲವು ವಿಚಾರ ಸಂಕಿರಣಗಳನ್ನು ಏರ್ಪಡಿಸಲಾಗಿದ್ದು ಅವುಗಳಲ್ಲಿ "ಜಾಗತೀಕರಣ ಮತ್ತು ಕರ್ನಾಟಕ" ಎಂಬ ಚರ್ಚಾ ವಿಷಯ ಹೊತ್ತ ಗೋಷ್ಠಿ ಕುತೂಹಲವನ್ನು ಕಾಯ್ದುಕೊಂಡಿದೆ. ಇದಕ್ಕೆ ಕಾರಣ ಭಾರತದಲ್ಲಿನ ಮಾರುಕಟ್ಟೆ ವ್ಯವಸ್ಥೆ ಹಾಗೂ ಜಾಗತೀಕರಣ ವಿಷಯಗಳಿಗೆ ಸಂಬಂಧಿಸಿ ಕರ್ನಾಟಕ ಅದರಲ್ಲೂ ಬೆಂಗಳೂರು ವಿಶ್ವದ ಗಮನ ಸೆಳೆಯುವಷ್ಟರ ಮಟ್ಟಿಗೆ ಬೆಳೆದಿರುವುದು.

ಬಿ.ವಿ.ನಾಯಕರ ಅಧ್ಯಕ್ಷತೆಯಲ್ಲಿ ನಡೆಯುವ ಈ ಗೋಷ್ಠಿಯಲ್ಲಿ ಆರ್ಥಿಕ ವಲಯಕ್ಕೆ ಸಂಬಂಧಿಸಿ ಹ.ಸೋಮಶೇಖರ, ಸಾಂಸ್ಕೃತಿಕ ವಲಯಕ್ಕೆ ಸಂಬಂಧಿಸಿ ಡಾ| ಎಚ್.ಟಿ.ಮೇಟಿ ಹಾಗೂ ರಾಜಕೀಯ ವಲಯಕ್ಕೆ ಸಂಬಂಧಿಸಿ ಪ್ರೊ| ವೈ.ಕೆ.ಚಂದ್ರಶೇಖರಪ್ಪ ತಮ್ಮ ವಿಷಯಗಳನ್ನು ಮಂಡಿಸಲಿದ್ದಾರೆ.

ನೀಲಾವರ ಸುರೇಂದ್ರ ಅಡಿಗ ಹಾಗೂ ಶ್ರೀಧರ ಶೆಟ್ಟಿ ಕೋಡಿ ಇವರುಗಳ ನಿರೂಪಣೆ ಇರುವ ಈ ಗೋಷ್ಠಿಯಲ್ಲಿ ಡಾ| ಬಿ.ಕೃಷ್ಣಪ್ಪ, ಬಾ.ಮ.ಬಸವರಾಜಯ್ಯ, ರಾಜಶೇಖರ ಇಚ್ಚಂಗಿ, ಪ್ರೊ| ಶಿವಾನಂದ ಕೆಳಗಿನಮನಿ, ಪ್ರೊ| ಎಂ.ಜಿ.ಈಶ್ವರಪ್ಪ ಹಾಗೂ ಆರ್.ಕೆ.ಸುಬೇದಾರ್ ಇವರುಗಳು ಪ್ರತಿಸ್ಪಂದಕರಾಗಿ ಭಾಗವಹಿಸಲಿದ್ದಾರೆ.
ಮತ್ತಷ್ಟು
ರಾಜಕೀಯ ಅಸ್ಥಿರತೆಗೆ ನಾನೇ ಕಾರಣ: ಸಿಂಧ್ಯಾ
14 ಶಾಸಕರ ಗುಡ್‌ಬೈ: ದಳ ಈಗ ಮತ್ತೊಮ್ಮೆ ವಿದಳ
ವಿವಿಗಳ ಗುಣಮಟ್ಟ ಸುಧಾರಣೆಗೆ ಸಮ್ಮೇಳನಾಧ್ಯಕ್ಷರ ಸಲಹೆ
ಅನ್ಯಾಯದ ವಿರುದ್ಧ ಕನ್ನಡಿಗರು ಮತ್ತೊಂದು ಹೋರಾಟ ಮಾಡಬೇಕೇ?: ಎಲ್ಎಸ್ಎಸ್ ಅಸಮಾಧಾನ
ಕನ್ನಡದ ಪರ ದನಿ ಎತ್ತುವ ಸಮರ್ಥ ನಾಯಕನಿಲ್ಲ: ಎಲ್ಎಸ್ಎಸ್
ಉಡುಪಿ ಸಾಹಿತ್ಯ ಸಮ್ಮೇಳನ : ಒಂದಷ್ಟು ವಿಶೇಷತೆಗಳು