ಉತ್ತರಹಳ್ಳಿಯ ಮಾಜಿ ಶಾಸಕ ಹಾಗೂ ಕನಕಪುರ ಕ್ಷೇತ್ರದ ಮಾಜಿ ಸಂಸದ ಎಂ.ಶ್ರೀನಿವಾಸ್ ಇಂದು ವಿಧ್ಯುಕ್ತವಾಗಿ ಬಿಜೆಪಿಗೆ ಸೇರಿದರು.
ರಾಜ್ಯ ಬಿಜೆಪಿಯ ಎಲ್ಲ ಮುಖಂಡರು ಹಾಗೂ ಶ್ರೀನಿವಾಸ್ ಬೆಂಬಲಿಗರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ನಗರದ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಮೈದಾನದಲ್ಲಿ ನಡೆದ ಈ ಸಮಾರಂಭದಲ್ಲಿ ಶ್ರೀನಿವಾಸ್ ಅವರಷ್ಟೇ ಅಲ್ಲದೆ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಕೃಷ್ಣಪ್ಪ ಹಾಗೂ 30 ಮಂದಿ ಸ್ಥಳೀಯ ಜೆಡಿಎಸ್ ಮುಖಂಡರು ಬಿಜೆಪಿಗೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀನಿವಾಸ್, ಜೆಡಿಎಸ್ನಲ್ಲಿರುವ ಕುಟುಂಬ ರಾಜಕಾರಣದಿಂದ ಬೇಸತ್ತು ತಾವು ಬಿಜೆಪಿಗೆ ಮರಳಬೇಕಾಗಿ ಬಂತು. ಬಿಜೆಪಿಗೆ ಅಧಿಕಾರ ಹಸ್ತಾಂತರಿಸದೆ ಕುಮಾರಸ್ವಾಮಿಯವರು ಅನ್ಯಾಯ ಮಾಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಬಹುಮತದೊಂದಿಗೆ ಬಿಜೆಪಿ ಸರ್ಕಾರ ರಚಿಸಲಿದೆ ಎಂದು ತಿಳಿಸಿದರು.
ಶ್ರೀನಿವಾಸ್ರನ್ನು ಪಕ್ಷಕ್ಕೆ ಸ್ವಾಗತಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಗೌಡರು, ಶ್ರೀನಿವಾಸ್ರಂತಹ ಮುಖಂಡರ ಸೇರ್ಪಡೆಯಿಂದ ಪಕ್ಷದ ಬಲ ವೃದ್ದಿಯಾಗಿದೆ ಎಂದು ತಿಳಿಸಿದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ಅನಂತ್ ಕುಮಾರ್, ಮಾಜಿ ಸಚಿವ ಅಶೋಕ್ ಮೊದಲಾದವರು ಸಮಾರಂಭದಲ್ಲಿ ಹಾಜರಿದ್ದರು.
|