ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಂಪ್ಯೂಟರ್ ಬಳಸಿ ಹಣ ಲೂಟಿಕೋರನ ಬಂಧನ
ಕಂಪ್ಯೂಟರ್ ಸಹಾಯದಿಂದ ಸಾರ್ವಜನಿಕರ ಬ್ಯಾಂಕ್ ಖಾತೆ ದೋಚುತ್ತಿದ್ದ ಕಳ್ಳನನ್ನು ಸಿಒಡಿ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ಮೂಲದ ಜೋಸೆಫ್ ಎಂಬವವನೇ ಈ ಕೃತ್ಯ ಎಸಗುತ್ತಿದ್ದು ಅವನೊಂದಿಗೆ ನಾಲ್ವರು ಸಹಚರರೂ ಇದ್ದಾರೆಂದು ತಿಳಿದುಬಂದಿದೆ. ಇವರ ಜಾಲ ಕರ್ನಾಟಕದಲ್ಲಿ ಮಾತ್ರವೇ ಅಲ್ಲದೆ ಕೇರಳ, ತಮಿಳುನಾಡು, ಮುಂಬೈ ಹಾಗೂ ದೆಹಲಿಯವರೆಗೂ ಹಬ್ಬಿತ್ತೆಂಬ ವಿಷಯವೂ ಹೊರಬಿದ್ದಿದೆ.

ಕೀ ಲಾಗರ್ಷಿ ಎಂಬ ಉಚಿತ ಸಾಫ್ಟ್‌ವೇರ್ ಬಳಸಿ ಜೋಸೆಫ್ ಈ ಕೃತ್ಯ ಎಸಗುತ್ತಿದ್ದ. ಜೋಸೆಫ್ ಇದಕ್ಕಾಗಿ ಮೊರೆ ಹೋಗುತ್ತಿದ್ದುದು ಸೈಬರ್ ಕೆಫೆಗಳನ್ನು. ಮುಂಚಿತವಾಗಿಯೇ ಈ ಸಾಫ್ಟ್ ಅನ್ನು ಕಂಪ್ಯೂಟರ್ಗೆ ಇನ್ಸ್ಟಾಲ್ ಮಾಡುತ್ತಿದ್ದ ಆತ ನಂತರ ಸೈಬರ್ ಕೆಫೆಯ ಹೊರಗೆ ಬಂದು ನಿಲ್ಲುತ್ತಿದ್ದ. ಸೈಬರ್ ಕೆಫೆ ಪ್ರವೇಶಿಸುವ ಸಾರ್ವಜನಿಕರು ಕಂಪ್ಯೂಟರ್ನಲ್ಲಿ ತಮ್ಮ ಬ್ಯಾಂಕ್ ವ್ಯವಹಾರ ಮುಗಿಸಿಕೊಂಡ ನಂತರ ಶೀಕೀ ಲಾಗರ್ಷಿ ಸಹಾಯದಿಂದ ಸಾರ್ವಜನಿಕರ ಬ್ಯಾಂಕ್ ಖಾತೆಗಳ ಪಾಸ್ವರ್ಡ್ ಪತ್ತೆ ಹಚ್ಚಿ ಹಣ ದೋಚುತ್ತಿದ್ದ ಎಂದು ತಿಳಿದುಬಂದಿದೆ.

ಈ ಮಾರ್ಗ ಅನುಸರಿಸಿ 10-12 ಲಕ್ಷ ರೂಪಾಯಿವರೆಗೆ ಆತ ದೋಚಿರುವುದಾಗಿ ತಿಳಿದುಬಂದಿದೆ. ಜೊತೆಗೆ ಸಾರ್ವಜನಿಕರ ಖಾತೆಯ ಸಹಾಯದಿಂದ ನೂರಾರು ಮೊಬೈಲ್ಗಳನ್ನೂ ರಿಚಾರ್ಜ್ ಮಾಡಿಸಿದ್ದಾನೆಂಬುದೂ ಅಚ್ಚರಿಯ ವಿಷಯವಾಗಿದೆ.
ಮತ್ತಷ್ಟು
ಶ್ರೀನಿವಾಸ್ ಬಿಜೆಪಿಗೆ ಸೇರ್ಪಡೆ
ಉಡುಪಿ ಸಾಹಿತ್ಯ ಸಮ್ಮೇಳನಕ್ಕೆ ನಾಳೆ ತೆರೆ
ಗೆದ್ದೆತ್ತಿನ ಬಾಲ ಹಿಡಿಯೋ ಪ್ರಕಾಶ್: ಮೆರಾಜ್ ಗೇಲಿ
ಶಾಸ್ತ್ರೀಯ ಸ್ಥಾನಮಾನ: ಕೇಂದ್ರಕ್ಕೆ ವರದಿ- ಮೊಯಿಲಿ
ರಾಮನಗರದಿಂದಲೇ ಸ್ಪರ್ಧೆ: ಕುಮಾರಸ್ವಾಮಿ
ನಮ್ಮಲ್ಲಿ ಭಿನ್ನಾಭಿಪ್ರಾಯವಿಲ್ಲ: ಸದಾನಂದ ಗೌಡ