ಜೆಡಿಎಸ್ನಿಂದ ಹೊರಬಂದಿರುವ ಮಾಜಿ ಸಚಿವ ಎಂ.ಪಿ.ಪ್ರಕಾಶ್ ಹಾಗೂ ಅವರ ಬೆಂಬಲಿಗರು ಬಿಜೆಪಿ ಸೇರುವುದಾದರೆ ಅವರಿಗೆ ಸ್ವಾಗತವಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಕ್ಷ ಸೇರುವ ತನಕ ಯಾವುದೇ ಆಶ್ವಾಸನೆ ನೀಡಲಾಗುವುದಿಲ್ಲ. ಸೇರಿದ ನಂತರ ಹಳಬರು-ಹೊಸಬರು ಎನ್ನದೇ ಎಲ್ಲರನ್ನೂ ಸಮಾನ ದೃಷ್ಟಿಯಲ್ಲಿ ನೋಡಲಾಗುವುದು ಎಂದು ತಿಳಿಸಿದರು.
ಜಗದೀಶ್ ಶೆಟ್ಟರ್ ಸೇರಿದಂತೆ ಹಲವರು ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರು. ಆದ್ದರಿಂದ ಜಿ.ಟಿ.ದೇವೇಗೌಡರ ಪಕ್ಷ ಸೇರ್ಪಡೆ ಸಮಾರಂಭದಲ್ಲಿ ಅವರು ಹಾಜರಿರಲಿಲ್ಲ ಎಂದು ಯಡಿಯೂರಪ್ಪ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.
ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ಗೆ ಈಗಷ್ಟೇ ಜ್ಞಾನೋದಯವಾದಂತಿದೆ. ಆದ್ದರಿಂದಲೇ ಅದು ಹಿಂದಿನ ಸರ್ಕಾರಗಳ ಹಗರಣಗಳ ಬಗ್ಗೆ ಪ್ರಸ್ತಾಪ ಮಾಡಿದೆ ಎಂದು ಯಡಿಯೂರಪ್ಪ ಗೇಲಿ ಮಾಡಿದ್ದಾರೆ.
|