ಶ್ರೀಕೃಷ್ಣ ಪೂಜೆ ಹಾಗೂ ಪರ್ಯಾಯ ಪೀಠವೇರುವ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥರ ನಿರ್ಧಾರಕ್ಕೆ ಪುಣೆಯ ಅಖಿಲಭಾರತ ಬ್ರಾಹ್ಮಣ ಮಹಾಸಭಾ ಬೆಂಬಲ ಸೂಚಿಸಿದೆ.
ಸುಗುಣೇಂದ್ರರು ಸಾಗರೋಲ್ಲಂಘನ ಮಾಡಿ ವಿದೇಶಗಳಿಗೆ ಭೇಟಿ ಇತ್ತಿರುವ ಹಿನ್ನೆಲೆಯಲ್ಲಿ ಅವರು ಕೃಷ್ಣ ಪೂಜೆ ಮಾಡಲು ಅರ್ಹರಲ್ಲ ಎಂಬ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮಹಾಸಭಾ ಈ ಬೆಂಬಲ ಸೂಚಿಸಿದೆ.
ಸುಗುಣೇಂದ್ರರು ಪರದೇಶಗಳಿಗೆ ಹೋಗಿ ಸನಾತನ ಹಿಂದೂ ಧರ್ಮದ ಪ್ರಚಾರ ಮಾಡಿಬಂದಿದ್ದಾರೆ, ಭಾರತೀಯ ಸಂಸ್ಕ್ಕತಿಯ ಅರಿವು ಮೂಡಿಸಿದ್ದಾರೆ. ಹೀಗೆ ಸತ್ಕಾರ್ಯಕ್ಕಾಗಿ ವಿದೇಶ ಯಾತ್ರೆ ಕೈಗೊಂಡು, ಧಾರ್ಮಿಕವಾಗಿ ಯಾವುದೇ ನಿಷಿದ್ಧ ಕಾರ್ಯಗಳನ್ನು ಮಾಡದೇ ಆಹಾರ ಶುದ್ದಿ ಮತ್ತು ಚಾರಿತ್ರ್ಯವನ್ನು ಕಾಪಾಡಿಕೊಂಡು ಬಂದರೆ ಅದು ಹೇಗೆ ಶಾಸ್ತ್ತ್ರಬಾಹಿರವಾಗುತ್ತದೆ ಎಂದು ಪ್ರಶ್ನಿಸಿರುವ ಮಹಾಸಭಾದ ಗೋವಿಂದ ಕುಲಕರ್ಣಿಯವರು ಇಂದಿನ ವಿಜ್ಞಾನ-ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಬದಲಾಗುತ್ತಿರುವ ಪರಿಸ್ಥಿತಿಗೆ ನಮ್ಮ ಮನೋಭಾವಗಳನ್ನೂ ಬದಲಾಯಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
|