ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತವರಿಗೆ ತೆರಳಲಿರುವ ಮಾಜಿ ಚತುರ್ಭುಜೆ
PTI
ಒಂದೂವರೆ ತಿಂಗಳ ಹಿಂದೆ ಬಿಹಾರದ ಈ ಪುಟ್ಟಬಾಲೆ ಬೆಂಗಳೂರಿಗೆ ಬಂದಾಗ ಆಕೆಯ ಕಣ್ಣುಗಳಲ್ಲಿ ಕಾಣುತ್ತಿದ್ದು ಶಿಶು ಸಹಜ ಮುಗ್ಧತೆ ಹಾಗೂ ಅಮಾಯಕತೆ. ಆಕೆಯ ಹೆತ್ತವರ ಕಣ್ಣುಗಳಲ್ಲಿ ಎಲ್ಲ ಸರಿಹೋಗುವುದೇ? ಎಂಬ ಪ್ರಶ್ನಾಭಾವ.

ಈಗ ಎಲ್ಲ ಒಂದು ಹಂತಕ್ಕೆ ಬಂದಿದೆ. ಬಿಹಾರದ ಅತ್ಯಂತ ಬಡ ಕುಟುಂಬದ ಬಾಲೆ-ಚತುರ್ಭುಜೆ ಲಕ್ಷಿಗೆ ಮಾಡಲಾದ ಆಪರೇಷನ್ ಯಶಸ್ವಿಯಾಗಿದ್ದು ಎಲ್ಲ ಮಕ್ಕಳಂತೆ ಆಕೆ ಚಟುವಟಿಕೆಯಿಂದಿರಬಹುದಾಗಿದೆ. ಇಂದು ಸಂಜೆ ಬಿಹಾರಕ್ಕೆ ತೆರಳಲಿರುವ ಲಕ್ಷ್ಮಿಗೆ ಆಕೆಯ ಚಿಕಿತ್ಸೆ ನಡೆದ ಸ್ಪರ್ಶ್ ಆಸ್ಪತ್ರೆಯಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿದೆ.

ಸ್ಪರ್ಶ ಆಸ್ಪತ್ರೆಯಲ್ಲಿ ಒಂದೂವರೆ ತಿಂಗಳ ಹಿಂದೆ ಇದ್ದ ಆತಂಕ, ಕಳವಳ ಈಗಿಲ್ಲ. ಎಲ್ಲೆಲ್ಲೂ ಹಬ್ಬದ ಸಂಭ್ರಮ. ವೈದ್ಯಲೋಕಕ್ಕೇ ಸವಾಲಾಗಿದ್ದ ಲಕ್ಷ್ಮಿಯ ಅಂಗವೈಚಿತ್ರ್ಯವನ್ನು ಸವಾಲಾಗಿ ಸ್ವೀಕರಿಸಿದ ಡಾ.ಶರಣ್ ಪಾಟೀಲರು, ನಿಪುಣ ವೈದ್ಯರ ತಂಡದ ನೆರವಿನಿಂದ 28 ಗಂಟೆಗಳ ಶಸ್ತ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾದಾಗ ಇಡೀ ವಿಶ್ವವೇ ಉಘೇ ಎಂದಿತ್ತು.

ಈಗ ಶಸ್ತ್ತ್ರಚಿಕಿತ್ಸೆಯಾದ ನಂತರ ಲಕ್ಷ್ಮಿ ಚೇತರಿಸಿಕೊಂಡಿದ್ದಾಳೆ. ಅವಳ ಈಗಿನ ಚಟುವಟಿಕೆಗಳ ಕುರಿತಾದ ಚಿತ್ರಗಳನ್ನು ಡಾ.ಪಾಟೀಲರು ಇಂದು ಮಧ್ಯಾಹ್ನ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಲಿದ್ದಾರೆ. ಬಿಹಾರಕ್ಕೆ ತೆರಳಿದ ನಂತರವೂ ಆಕೆ ಕೆಲವೊಂದು ಔಷಧಿಗಳನ್ನು ಮುಂದುವರಿಸಬೇಕಿದ್ದು ಈ ಅವಧಿಯಲ್ಲಿ ಅಲ್ಲಿನ ವೈದ್ಯರೊಂದಿಗೆ ಡಾ.ಪಾಟೀಲರು ನಿರಂತರ ಸಂಪರ್ಕದಲ್ಲಿರುತ್ತಾರೆ ಎಂದು ತಿಳಿದುಬಂದಿದೆ.

ಕೆಲ ತಿಂಗಳ ನಂತರ ಮತ್ತೆ ಬಿಹಾರಕ್ಕೆ ತೆರಳಲಿರುವ ಡಾ.ಪಾಟೀಲರು ಲಕ್ಷ್ಮಿಯನ್ನು ವಾಪಸ್ ಬೆಂಗಳೂರಿಗೆ ಕರೆತಂದು ಅಗತ್ಯವಿರುವ ಮತ್ತಷ್ಟು ಚಿಕಿತ್ಸೆಗಳನ್ನು ನೀಡಲಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಮತ್ತಷ್ಟು
ಹಾಲಿನ ಬೆಲೆ ಏರಿಕೆ: ರಾಜ್ಯಪಾಲರ ಅಸಮಾಧಾನ
ಶ್ರೀಕೃಷ್ಣ ಪೂಜೆ-ಪರ್ಯಾಯ: ಬ್ರಾಹ್ಮಣ ಮಹಾಸಭಾಬೆಂಬಲ
ತಪ್ಪುದಾರಿಗೆಳೆಯುತ್ತಿರುವ ಬಿಜೆಪಿ:ರೆಡ್ಡಿ
ಕಬ್ಬಿನ ದರ ಕುರಿತು ಸೂಕ್ತ ನಿರ್ಧಾರ: ಠಾಕೂರ್
ಫಲಿತಾಂಶದ ನಂತರ ಪಕ್ಷದ ಆಯ್ಕೆ: ಪ್ರಕಾಶ್
ಎಂ.ಪಿ.ಪ್ರಕಾಶ್‌ಗೆ ಯಡಿಯೂರಪ್ಪ ಸ್ವಾಗತ