ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪುತ್ತಿಗೆ ಶ್ರೀಗಳದು ಅನನ್ಯ ರೀತಿಯ ಧರ್ಮಪ್ರಚಾರ
ಸಾಗರೋಲ್ಲಂಘನ ಮಾಡಿ ಬಂದಿರುವ ಮಠಾಧೀಶರಿಗೆ ಶ್ರೀಕೃಷ್ಣ ಪೂಜೆ ಹಾಗೂ ಪರ್ಯಾಯದ ಹಕ್ಕು ಸಲ್ಲ ಎಂಬ ಧರ್ಮಜಿಜ್ಞಾಸೆಗಳು ಈಗಾಗಲೇ ಎದ್ದಿವೆ. ಈ ಹಿನ್ನೆಲೆಯಲ್ಲಿ ಅಮೆರಿಕದಲ್ಲಿನ ವಿಶ್ವ ಮಾಧ್ವ ಸಂಘವು ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ವಿದೇಶಗಳಲ್ಲಿ ಪುತ್ತಿಗೆ ಶ್ರೀಗಳ ಧರ್ಮಪ್ರಚಾರದ ಕುರಿತು ಸ್ಪಷ್ಟ ವಿವರಣೆಗಳನ್ನು ನೀಡಿದೆ:

ಹಿಂದೂ ಸಂಸ್ಕ್ಕತಿಯ ಕುರಿತಾಗಿ ನಾವೆಲ್ಲರೂ ಹೆಮ್ಮೆ ಪಡುವ ರೀತಿಯಲ್ಲಿ ಸುಗುಣೇಂದ್ರ ತೀರ್ಥರು ವಿದೇಶದಲ್ಲಿ ಅಚ್ಚರಿಯ ಸಾಧನೆಗಳನ್ನು ಮಾಡಿದ್ದಾರೆ. ಶ್ರೀಗಳು 1997ರಿಂದ ಅಮೆರಿಕಕ್ಕೆ ಭೇಟಿ ನೀಡಲು ಪ್ರಾರಂಭಿಸಿದ ನಂತರ ಇಲ್ಲಿನ ಹಿಂದೂ ಸಮುದಾಯ ಹಾಗೂ ಕೃಷ್ಣಭಕ್ತರ ಸಮೂಹ ಪುನಶ್ಚೇತನ ಕಂಡಿವೆ. ಇದಕ್ಕೂ ಮುಂಚೆ ಈ ಸಂಘಟನೆಗಳಿಗೆ ಯಾವುದೇ ಸ್ವರೂಪವಿರಲಿಲ್ಲ.

ಅಮೆರಿಕದಲ್ಲಿನ ಜನರ ಆಧ್ಯಾತ್ಮಿಕ ಅಗತ್ಯತೆಗಳನ್ನು ಮನಗಂಡ ಶ್ರೀಗಳು ಎಡಿಸನ್, ನ್ಯೂಜರ್ಸಿ, ಫೀನಿಕ್ಸ್, ಅರಿಜೋನಾ ಹಾಗೂ ಲಾಸ್ ಏಂಜಲೀಸ್ ಪ್ರದೇಶಗಳಲ್ಲಿ ದೇವಾಲಯಗಳನ್ನು ತೆರೆದಿದ್ದಾರೆ. ಈ ದೇವಾಲಯಗಳು ನಡೆಸುವ ಧಾರ್ಮಿಕ ಚಟುವಟಿಕೆಗಳು ಹಾಗೂ ತರಗತಿಗಳಿಂದ ಆಧ್ಯಾತ್ಮಿಕ ಶಾಂತಿ-ನೆಮ್ಮದಿಗಳನ್ನು ಇಲ್ಲಿನ ಜನ ಅನುಭವಿಸುತ್ತಿದ್ದಾರೆ. ಇದಕ್ಕೆಲ್ಲಾ ಸ್ಫೂರ್ತಿ ಪುತ್ತಿಗೆ ಶ್ರೀಗಳೇ ಎಂಬುದರಲ್ಲಿ ಎರಡು ಮಾತಿಲ್ಲ.

ಎಷ್ಟೇ ಬಿಡುವಿಲ್ಲದ ಚಟುವಟಿಕೆಗಳಿದ್ದರೂ ಅದರ ಮಧ್ಯೆಯೂ ಶ್ರೀಗಳು ತಮ್ಮ ಎಂದಿನ ಪೂಜೆ-ಪುನಸ್ಕಾರ-ಅನುಷ್ಠಾನಗಳನ್ನು ಕೈಗೊಳ್ಳುತ್ತಿದ್ದರು. ಇದು ಎಲ್ಲ ಅನುಯಾಯಿಗಳಿಗೂ ಸ್ಫೂರ್ತಿಯಾಗಿದೆ. ಅಮೆರಿಕ ಅಧ್ಯಕ್ಷ ಬುಷ್ ಸೇರಿದಂತೆ ಹಲವು ಹನ್ನೊಂದು ಸಾರ್ವಜನಿಕ ಅಧಿಕಾರಿಗಳನ್ನು ಭೇಟಿಯಾಗಿರುವ ಪುತ್ತಿಗೆ ಶ್ರೀಗಳು ಅಮೆರಿಕದ ಸಮಾಜದಲ್ಲಿ ಹಿಂದುತ್ವದ ಕುರಿತಾಗಿ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಲವು ವಿಶ್ವವಿದ್ಯಾಲಯಗಳಲ್ಲಿ ಪ್ರವಚನಗಳನ್ನು ನೀಡಿದ್ದಾರೆ.

ಅಮೆರಿಕದಲ್ಲಿ ನಡೆಯುತ್ತಿರುವ ವಾರ್ಷಿಕ ಮೆಟ್ಟಿಲೋತ್ಸವ ಆಚರಣೆಯ ಅನುಷ್ಠಾನ ಸ್ವಾಮೀಜಿಗಳ ವಿದೇಶ ಭೇಟಿಯ ಫಲಶ್ರುತಿಯೇ ಎನ್ನಬೇಕು. ಭಾರತದ ತಿರುಪತಿ ಹಾಗೂ ಇತರ ಧಾರ್ಮಿಕ ಕೇಂದ್ರಗಳಲ್ಲಿ ನಡೆಯುವಂತೆಯೇ ಈ ಆಚರಣೆ ನಡೆಯತ್ತದೆ. ಬಹಳ ವರ್ಷಗಳ ಹಿಂದೆಯೇ ಪಿಟ್ಸ್‌ಬರ್ಗ್‌ಲ್ಲಿರುವ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಶ್ರೀಗಳ ದಿವ್ಯಸಾನಿಧ್ಯದಲ್ಲಿ ವಿಷ್ಣು ಸಹಸ್ರನಾಮ ಹೋಮ ನಡೆದಾಗ ಈ ಆಚರಣೆಗೆ ಚಾಲನೆ ಸಿಕ್ಕಿತ್ತು.

ಅಂದು ಪ್ರಾರಂಭವಾದ ಈ ಆಚರಣೆ ನಿರಂತರವಾಗಿ ನಡೆದುಬಂದಿದ್ದು ಇಲ್ಲಿನ ಭಕ್ತಾದಿಗಳು ಅದಕ್ಕೆಂದೇ ಎದಿರುನೋಡುವಂತಿರುತ್ತದೆ. ಇದಕ್ಕೆಲ್ಲಾ ಮೂಲ ಕಾರಣ ಪುತ್ತಿಗೆ ಶ್ರೀಗಳಾದ ಶ್ರೀ ಸುಗುಣೇಂದ್ರ ತೀರ್ಥರು ಎಂಬುದರಲ್ಲಿ ಎರಡು ಮಾತಿಲ್ಲ ಎಂದಿರುವ ವಿಶ್ವ ಮಾಧ್ವ ಸಂಘವು, ನಿಜವಾದ ಗುರುವಿನ ಪಾತ್ರ ವಹಿಸಿರುವ ಶ್ರೀಗಳಿಗೆ ಶ್ರೀಕೃಷ್ಣ ಪೂಜೆಗೆ ಸಂಬಂಧಿಸಿ ಸಂಪೂರ್ಣ ಗೌರವಾದರಗಳು ದೊರೆಯಬೇಕು ಹಾಗೂ ಉಡುಪಿಯಲ್ಲಿ ಅವರು ಯಶಸ್ವಿಯಾಗಿ ಪರ್ಯಾಯವನ್ನು ನಡೆಸಲು ಅನುವು ಮಾಡಿಕೊಡಬೇಕು ಎಂದು ಕೇಳಿಕೊಂಡಿದೆ.
ಮತ್ತಷ್ಟು
ಗೊಂದಲಗಳಿಗೆ ಸದ್ಯದಲ್ಲಿಯೇ ತೆರೆ: ಪುತ್ತಿಗೆ ಶ್ರೀ
ಪಕ್ಷಪಾತ ಮಾಡಿಲ್ಲ: ಕುಮಾರಸ್ವಾಮಿ
ತವರಿಗೆ ತೆರಳಲಿರುವ ಮಾಜಿ ಚತುರ್ಭುಜೆ
ಹಾಲಿನ ಬೆಲೆ ಏರಿಕೆ: ರಾಜ್ಯಪಾಲರ ಅಸಮಾಧಾನ
ಶ್ರೀಕೃಷ್ಣ ಪೂಜೆ-ಪರ್ಯಾಯ: ಬ್ರಾಹ್ಮಣ ಮಹಾಸಭಾಬೆಂಬಲ
ತಪ್ಪುದಾರಿಗೆಳೆಯುತ್ತಿರುವ ಬಿಜೆಪಿ:ರೆಡ್ಡಿ