ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಳಿಗೆಯಲ್ಲಿ ಪ್ರತ್ಯಕ್ಷವಾದ ಆನುದೇವಾ...
ಕನ್ನಡ ಸಾಹಿತ್ಯ ಸಮ್ಮೇಳನದ ನೋಟಗಳು
ವಿಶೇಷ ವರದಿ: ಯಗಟಿ ರಘು ನಾಡಿಗ್
ಅರೆ! ಈ ಪುಸ್ತಕ ಬ್ಯಾನ್ ಅಗಿತ್ತು ಅಲ್ವಾ? ಹ್ಯಾಗ್ ಬಂತೂ? ಈ ರೀತಿಯ ಉದ್ಗಾರ ಕೇಳಿ ಬಂದದ್ದು ಕೆಲ ಪುಸ್ತಕ ಮಳಿಗೆಗಳ ಬಳಿ. ಡಾ|ಬಂಜಗೆರೆ ಜಯಪ್ರಕಾಶ್ರವರ ಆನುದೇವಾ ಹೊರಗಣವನು ಕೃತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿರುವ ವಿಷಯ, ಅದಕ್ಕೆ ಮುಂಚಿತವಾಗಿ ಬಂಜಗೆರೆಯವರೂ ಇದನ್ನು ವಾಪಸ್ ಪಡೆಯುವುದಾಗಿ ಹೇಳಿದ ವಿಷಯ ಎಲ್ಲರಿಗೂ ತಿಳಿದಿದೆ.

ಆದರೆ ಈ ಪುಸ್ತಕ ಇಲ್ಲಿನ ಕೆಲ ಮಳಿಗೆಗಳಲ್ಲಿ ಸಿಕ್ಕಿದ್ದು ಹಲವರ ಅಚ್ಚರಿಗೆ ಕಾರಣವಾಗಿತ್ತು. ಈ ಪುಸ್ತಕಕ್ಕಾಗಿ ಹುಡುಕಾಡಿ ಸಾಕಾಗಿತ್ತು. ಸದ್ಯ ಸಿಕ್ತಲ್ಲ ಎಂಬುದು ಪುಸ್ತಕ ಕೊಂಡವರ ಮಾತಾಗಿತ್ತು.

ಹೆಸರಿಗೆ ಸಾಹಿತ್ಯ ಸಮ್ಮೇಳನವಾದರೂ ಸಾಂಸ್ಕ್ಕತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಜನಸಂದಣಿ ಇರುತ್ತಿತ್ತು. ಇದು ಜನರ ಬದಲಾದ ಅಭಿರುಚಿಯ ಸಂಕೇತವೋ ಅಥವಾ ಗೋಷ್ಠಿಗಳ ನೀರಸತೆಯೋ ಎಂಬುದನ್ನು ಅಷ್ಟಕ್ಕೇ ಬಿಡದೆ, ಅವಲೋಕನ ಮಾಡಿಕೊಳ್ಳುವುದು ಒಳ್ಳೆಯದು ಎಂದು ಸಾಹಿತ್ಯ ಪ್ರೇಮಿಯೊಬ್ಬರು ನುಡಿಯುತ್ತಿದ್ದುದು ಸಾಹಿತ್ಯ ಸಮ್ಮೇಳನ ಎಂದರೆ ಜಾತ್ರೆ ಎಂಬ ಮಾತುಗಳಿಗೆ ಕನ್ನಡಿ ಹಿಡಿಯುವಂತಿತ್ತು.

ಗೋಷ್ಠಿಗಳಲ್ಲಿ ಗಂಭೀರವಾದ ವಿಷಯಗಳಿರಬೇಕು ನಿಜ. ಅದರೆ ಪ್ರಬಂಧ ಮಂಡನೆ ಅಗತ್ಯಕ್ಕಿಂತ ಹೆಚ್ಚು ಪ್ರೌಢಿಮೆಯಿಂದ ಕೂಡಿದ್ದರೆ ಅದು ಪ್ರೇಕ್ಷಕರ ತಾಳ್ಮೆಯನ್ನೇ ಪರೀಕ್ಷಿಸುವ ಮಟ್ಟಕ್ಕೆ ಹೋಗುತ್ತದೆ. ಅದರಲ್ಲೂ ಕಾನೂನು ಸಾಹಿತ್ಯ, ಜಾಗತೀಕರಣ ಮುಂತಾದ ವಿಷಯಗಳ ಕುರಿತು ಪ್ರಬಂಧ ಮಂಡಿಸುವಾಗಲಂತೂ ಪೀಠಿಕೆಗೇ ಹೆಚ್ಚಿನ ಸಮಯ ವ್ಯರ್ಥವಾಗುತ್ತಿತ್ತು.

ಇದರ ಜೊತೆಗೆ ಸಂಬಂಧಪಡದ ವಿಷಯಗಳೆಡೆಗೆ ಹಣಿಕಿ ಹಾಕುವ ವ್ಯರ್ಥ ಪ್ರಯತ್ನ ಬೇರೆ. ಗೋಷ್ಠಿ ಪ್ರೇಕ್ಷಕರ ಆಲೋಚನಾ ಲಹರಿಗೆ ಎಟುಕದಂತಿರುವುದಕ್ಕೆ ಇದಕ್ಕಿಂತ ಉಪಾಯ ಬೇಕೇ?

ಸಮ್ಮೇಳನದ ನೀರಸ ಗೋಷ್ಠಿಗಳಿಗೆ ದೊರೆತ ಪ್ರತಿಕ್ರಿಯೆ ಈ ರೀತಿಯದಾದರೆ ಹನಿಗವನದ ಗೋಷ್ಠಿಯದು ಮತ್ತೊಂದು ಬಗೆಯದಾಗಿತ್ತು. ಹನಿಗವನ ಎಂದು ಪಾಠ ಓದಲು ಕೆಲವರು ಪ್ರಾರಂಭಿಸಿದರೆ ಅನಗತ್ಯವಾಗಿ ಪ್ರಾಸ ಸೇರಿಸಲು ಹೆಣಗುತ್ತಿದ್ದುದು ಇನ್ನು ಕೆಲವರ ಸಮಸ್ಯೆಯಾಗಿತ್ತು. ಆದರೆ ಈ ಮಾತಿಗೆ ಕವಿಗೋಷ್ಠಿ ಅಪವಾದವಾಗಿತ್ತು. ಕೊನೆಯವರೆಗೂ ಅಲ್ಲಿ ಕುರ್ಚಿಗಳು ತುಂಬಿಕೊಂಡಿರುತ್ತಿದ್ದವು.

ಗೋಷ್ಠಿಗೆ ಬರುವವರ ವಿದ್ವತ್ತೆಲ್ಲ ವಿದ್ವತ್ಪೂರ್ಣ ಪ್ರಬಂಧ ಮಂಡಿಸುವುದರಲ್ಲೇ ಮುಗಿಯುತ್ತದೆ, ಯಾವುದೂ ಕಾರ್ಯರೂಪಕ್ಕೆ ಬರುವುದಿಲ್ಲ. ಅದರ ಬದಲು ಈ ಸಾಂಸ್ಕ್ಕತಿಕ ಕಾರ್ಯಕ್ರಮದಲ್ಲಾದರೂ ಕೂತರೆ ಒಂದಷ್ಟು ಮನಸ್ಸಾದರೂ ಹಗುರವಾಗುತ್ತದೆ ಎಂದು ನಂದಿಗ್ರಾಮದ ಶ್ರೀಕಂಠಯ್ಯನವರು ಹೇಳಿದ್ದು ಕಟುಸತ್ಯ ಮಾತ್ರ ಆಗಿರಲಿಲ್ಲ, ಸಂಬಂಧಪಟ್ಟವರಿಗೆ ನೀಡಿದ ಅವಲೋಕನದ ಗಂಟೆಯೂ ಅಗಿತ್ತು!
ಮತ್ತಷ್ಟು
ಪ್ರಕಾಶ್ ಕಾಂಗ್ರೆಸ್‌ಗೆ?:ಮೊಯ್ಲಿ ಜತೆ ಮಾತುಕತೆ
ಪುತ್ತಿಗೆ ಶ್ರೀಗಳದು ಅನನ್ಯ ರೀತಿಯ ಧರ್ಮಪ್ರಚಾರ
ಗೊಂದಲಗಳಿಗೆ ಸದ್ಯದಲ್ಲಿಯೇ ತೆರೆ: ಪುತ್ತಿಗೆ ಶ್ರೀ
ಪಕ್ಷಪಾತ ಮಾಡಿಲ್ಲ: ಕುಮಾರಸ್ವಾಮಿ
ತವರಿಗೆ ತೆರಳಲಿರುವ ಮಾಜಿ ಚತುರ್ಭುಜೆ
ಹಾಲಿನ ಬೆಲೆ ಏರಿಕೆ: ರಾಜ್ಯಪಾಲರ ಅಸಮಾಧಾನ