ಗೋಪಾಲಕೃಷ್ಣ ಅಡಿಗ ವೇದಿಕೆ; ಉಡುಪಿ: ಕನ್ನಡ ಭಾಷೆಗೆ ಶಾಸ್ತ್ತ್ರೀಯ ಸ್ಥಾನಮಾನ ದೊರಕಿಸುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಅವರಿಗೆ ಮುತ್ತಿಗೆ ಹಾಕಲಾಯಿತು.
ಸಮ್ಮೇಳನಕ್ಕೆ ಆಗಮಿಸಿದ ಆಸ್ಕರ್ ಫರ್ನಾಂಡಿಸ್ ಅವರನ್ನು ಸ್ವಾಗತಿಸುವ ಸಂದರ್ಭದಲ್ಲಿ, ಕನ್ನಡಕ್ಕೆ ಶಾಸ್ತ್ತ್ರೀಯ ಭಾಷೆಯ ಸ್ಥಾನಮಾನ ನೀಡುವುದಕ್ಕೆ ಸಂಬಂಧಿಸಿ ಸಂಸದರು ಗಮನ ನೀಡುತ್ತಿಲ್ಲ. ಈ ಕುರಿತು ಕೇಂದ್ರ ಸಚಿವ ಎಂ.ವಿ.ರಾಜಶೇಖರನ್ ಮಾಡುತ್ತಿರುವ ಪ್ರಯತ್ನಕ್ಕೆ ಸಹಕಾರ ನೀಡುತ್ತಿಲ್ಲ ಎಂದು ಚಂಪಾ ತರಾಟೆಗೆ ತೆಗೆದುಕೊಂಡರು.
ಆಗ ರೊಚ್ಚಿಗೆದ್ದ ಕನ್ನಡ ಹೋರಾಟಗಾರರು ಆಸ್ಕರ್ರವರಿಗೆ ಮುತ್ತಿಗೆ ಹಾಕಿ ಘೋಷಣೆ ಕೂಗಿದಾಗ, ಇದನ್ನು ಪ್ರತಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರೂ ವಾದಕ್ಕಿಳಿದರು. ಈ ಸಂದರ್ಭದಲ್ಲಿ ಕನ್ನಡ ಹೋರಾಟಗಾರರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾಪಟಿ ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಹೋರಾಟಗಾರ ಉದಯ ಧರ್ಮಸ್ಥಳ ಅವರ ಮೇಲೆ ಹಲ್ಲೆ ನಡೆಯಿತು ಎಂಬುದೂ ಕೇಳಿಬಂತು.
ಕೊನೆಗೆ ಮಣಿದ ಆಸ್ಕರ್ ಫರ್ನಾಂಡಿಸ್ ಈ ಕುರಿತು ಸೂಕ್ತ ಪ್ರಯತ್ನ ನಡೆಸುವುದಾಗಿ ಆಶ್ವಾಸನೆ ನೀಡಿದರು.
|