ಬಂಡಾಯ ನಾಯಕ ಎಂ.ಪಿ.ಪ್ರಕಾಶ್ ಪಕ್ಷವನ್ನು ತೊರೆದುಹೋಗಿದ್ದರ ಹಿಂದೆ ಅಡಗಿರುವ ಕಾರಣವನ್ನು ನಾಳೆ ಬಹಿರಂಗಪಡಿಸುವೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.
ರಾಜಾಜಿನಗರದ ಶಿವನಗರದ ಶ್ರೀ ಚಾಮುಂಡೇಶ್ವರಿ ಕನ್ನಡ ಯುವಕ ವೃಂದದ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಜೆಡಿಎಸ್ ಪಕ್ಷ ಮೊದಲಿನಿಂದಲೂ ಉತ್ತಮ ನಾಯಕರನ್ನು ಸೃಷ್ಟಿಸುತ್ತಾ ಬಂದಿರುವುದರಿಂದ ಇಂತಹ ನಾಯಕರು ಪಕ್ಷ ಬಿಟ್ಟರೆ ಕೊರತೆಯೇನೂ ಕಂಡುಬರುವುದಿಲ್ಲ ಎಂದು ತಿಳಿಸಿದರು.
ತತ್ವ, ಸಮಾಜವಾದ, ಪಕ್ಷನಿಷ್ಠೆ ಎನ್ನುವ ಮಾತುಗಳನ್ನಾಡುತ್ತಿದ್ದ ಈ ನಾಯಕರು ಈ ಎಲ್ಲವನ್ನೂ ಮರೆತು ಪಕ್ಷ ಬಿಡಲು ಕಾರಣವೇನು, ಇದರ ಹಿಂದಿನ ವಾಸ್ತವ ಸಂಗತಿಯೇನು ಎಂಬುದನ್ನು ಸದ್ಯದಲ್ಲಿಯೇ ಬಹಿರಂಗಪಡಿಸುವೆ ಎಂದು ಕುಮಾರಸ್ವಾಮಿ ಗುಡುಗಿದ್ದಾರೆ.
|