ಭಾರತದ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಲು ಇಸ್ರೋ ಸಿದ್ಧತೆ ನಡೆಸಿದೆ.
ಬೆಂಗಳೂರು ಹೊರವಲಯದ ಬೈಲಾಳು ಎಂಬಲ್ಲಿ ಬಾಹ್ಯಾಕಾಶ ನೌಕೆಯ ನಿರ್ವಹಣೆಗಾಗಿ 30 ಕಿಲೋಮೀಟರ್ ವ್ಯಾಪ್ತಿಯಲ್ಲಿ ಬೃಹತ್ ಪ್ರಮಾಣದ ಆಂಟೆನಾ ಸ್ಥಾಪಿಸಲಾಗಿದೆ. ಬೈಲಾಳುವಿನಲ್ಲಿ ಸ್ಥಾಪಿಸಲಾದ ಈ ಚಂದ್ರಯಾನ ಅಂತರಿಕ್ಷ ನೌಕೆ ಬಾಹ್ಯಾಕಾಶ ನೌಕೆಗೆ ಸೂಚನೆಗಳನ್ನು ರವಾನೆ ಮಾಡಲಿದೆ.
ದೇಶದ ಭವಿಷ್ಯದ ಹಲವಾರು ಯೋಜನೆಗಳನ್ನು ಗಮನಿಸಿ ನೂರಾರು ಕೋಟಿ ರೂಗಳನ್ನು ಈ ಯೋಜನೆಗಾಗಿ ವ್ಯಯಿಸಲಾಗಿದೆ,.
ನಗರದ ಹೊರವಲಯದ ಬೈಲಾಳುವಿನ ಸುಮಾರು 135 ಎಕರೆ ವಿಸ್ತೀರ್ಣದಲ್ಲಿ ಬಾಹ್ಯಾಕಾಶ ನೌಕೆಯ ಸಂಪೂರ್ಣ ನಿರ್ವಹಣೆ ನಡೆಯಲಿದೆ.
ಚಂದ್ರಯಾನ -1 ಮುಂದಿನ ವರ್ಷ ಎಪ್ರಿಲ್ ನಲ್ಲಿ ಉಡಾವಣೆಯಾಗಲಿದೆ. ಇದರ ಜೀವಿತಾವಧಿ ಕೇವಲ ಎರಡು ವರ್ಷಗಳಾಗಿದ್ದು, ಚಂದ್ರನ ಮೇಲ್ಪದರವನ್ನು ವೈಜ್ಞಾನಿಕವಾಗಿ ಇದು ಅಧ್ಯಯನ ನಡೆಸಲಿದೆ.
|