ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಇಲ್ಲ ; ಎಂ.ವಿ ರಾಜಶೇಖರನ್
ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಯ ಬಗ್ಗೆ ಇನ್ನೂ ಸುಳಿವಿಲ್ಲ. ಇನ್ನೊಂದೆಡೆ ಅಧ್ಯಕ್ಷತೆಯ ಗಾದಿಗೆ ಪಕ್ಷದೊಳಗೆ ತೀವ್ರತರದ ಪೈಪೋಟಿಯೂ ಕಂಡು ಬಂದಿದೆ.

ಒಂದು ಮೂಲದ ಪ್ರಕಾರ ಪ್ರಸ್ತುತ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವಧಿಯಲ್ಲಿ ರಾಜ್ಯದಲ್ಲಿ ಸಾಕಷ್ಟು ಪಕ್ಷದ ಸಂಘಟನೆ ನಡೆದಿಲ್ಲ. ಈ ಕಾರಣಕ್ಕೆ ಅವರ ಸ್ಥಾನಕ್ಕೆ ಯುವಕರನ್ನು ಅಧ್ಯಕ್ಷರನ್ನಾಗಿ ಮಾಡಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂಬ ಸಂದೇಶಗಳೂ ಹೈಕಮಾಂಡ್ ಗೆ ರವಾನೆಯಾಗಿದೆ. ಆದರೆ ಅಧ್ಯಕ್ಷ ಸ್ಥಾನದ ಬದಲಾವಣೆ ಯಾವ ಕಾರಣಕ್ಕೂ ಇಲ್ಲ ಎಂದು ಕೇಂದ್ರ ಸಚಿವ ಎಂ.ವಿ.ರಾಜಶೇಖರನ್ ಹೇಳಿದ್ದಾರೆ.

ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಕ್ಷ ಸಂವರ್ಧನೆಯೊಂದೇ ಸದ್ಯ ಕಾಂಗ್ರೆಸ್ ಎದುರು ಇರುವ ಸವಾಲು. ಮೇ ಪ್ರಥಮ ವಾರದಲ್ಲಿ ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆ ಬರಲಿದೆ ಎಂಬ ಸೂಚನೆಯನ್ನು ನೀಡಿದ ರಾಜಶೇಖರನ್, ಪಕ್ಷ ಚುನಾವಣೆಗೆ ಸಿದ್ಧತೆ ಆರಂಭಿಸಿದೆ ಎಂದರು.

ಕನ್ನಡಕ್ಕೆ ಶಾಸ್ತ್ತ್ರೀಯ ಭಾಷಾ ಸ್ಥಾನಮಾನ ಬೇಡಿಕೆಯನ್ನು ಪರೀಶೀಲನೆಗಾಗಿ ತಜ್ಞರ ಸಮಿತಿ ರೂಪುಗೊಂಡಿದೆ ಎಂದರು.
ಮತ್ತಷ್ಟು
ಚಂದ್ರನತ್ತ ಇಸ್ರೋ ನಡೆ
ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಜೆಡಿಎಸ್ ಸಮಾವೇಶ
ಕೆಪಿಸಿಸಿ ಪುನರಚನೆ ಇಲ್ಲ
ಪ್ರಕಾಶ್ ತೊರೆದ ಕಾರಣ ನಾಳೆ ಬಹಿರಂಗ: ಕುಮಾರಸ್ವಾಮಿ
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ: ಆಸ್ಕರ್‌ಗೆ ಮುತ್ತಿಗೆ
ಮಳಿಗೆಯಲ್ಲಿ ಪ್ರತ್ಯಕ್ಷವಾದ ಆನುದೇವಾ...