ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನುಡಿಹಬ್ಬದ ಸಡಗರ ಮುಗೀತು; ಮುಂದ...?!
ಉಡುಪಿ: ಹಲವು ನೀರೀಕ್ಷೆಗಳನ್ನು ಹುಟ್ಟುಹಾಕಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಎಂಬ ಹಬ್ಬ ಮುಗಿಯಿತು. ಹಬ್ಬಕ್ಕೆ ಬಂದಿದ್ದ ನೆಂಟರಿಷ್ಟರೂ ಕೂಡ ಅವರವರ ಗೂಡು ಸೇರಾಯ್ತು. ಮುಂದ..?!!

ಯಾವುದೇ ಅದ್ದೂರಿ ಸಮಾರಂಭ-ಆಚರಣೆ ನಡೆದ ನಂತರ ಆ ಸ್ಥಳದಲ್ಲಿ ಒಂದು ತೆರನಾದ ನೀರಸ ವಾತಾವರಣ ಏರ್ಪಡುವುದು ಸಹಜ. ಸದ್ಯದಲ್ಲಿಯೇ ಶ್ರೀಕೃಷ್ಣ ಮಠದ ಪರ್ಯಾಯಕ್ಕೆ ಸಂಬಂಧಿಸಿದಂತೆ ಬಿಸಿ ಏರುತ್ತದೆಯಾದರೂ ಸಮಾರಂಭ ಮುಗಿದು ಗಂಟುಮೂಟೆ ಕಟ್ಟಿದ ನಂತರ ಕಂಡು ಬರುವ ನೀರವತೆಗೆ ಉಡುಪಿಯೂ ಹೊರತಾಗಿಲ್ಲ.

ಸಮ್ಮೇಳನ ನಡೆದ ಶಿವರಾಮ ಕಾರಂತ ಮಹಾಮಂಟಪದಲ್ಲಿನ ಸಹಸ್ರಾರು ಕುರ್ಚಿಗಳು, ಪ್ಲಾಸ್ಟಿಕ್ ಲೋಟ, ನೀರಿನ ಬಾಟಲಿಗಳು, ಕರಪತ್ರಗಳು ಅಸ್ತವ್ಯಸ್ತವಾಗಿ ಕಾಣಿಸುತ್ತಿದ್ದುದು ಈ ಮಾತುಗಳಿಗೆ ಪುಷ್ಟಿ ನೀಡುವಂತಿದ್ದವು. ಕರ್ನಾಟಕದ ಇತರ ಭಾಗಗಳಿಂದ ಬಂದಿದ್ದ ಜನರಿಗೆ ಉಳಿದುಕೊಳ್ಳಲು ಶಾಲೆ-ಕಾಲೇಜು-ಕಲ್ಯಾಣ ಮಂಟಪಗಳಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಇವೆಲ್ಲ ಯಥಾಸ್ಥಿತಿಗೆ ಬರಬೇಕಿದ್ದರೆ ಒಂದೆರಡು ದಿನಗಳು ಬೇಕಾದಾವು ಎಂಬುದು ಓರ್ವ ಸಾಹಿತ್ಯಾಭಿಮಾನಿಯ ಅಭಿಪ್ರಾಯ.

ಸಮ್ಮೇಳನದಲ್ಲಿ ಘಟಿಸಿದ ಒಂದೆರಡು ಧಿಕ್ಕಾರ, ಘೆರಾವ್‌ಗಳನ್ನು ಹೊರತು ಪಡಿಸಿದರೆ ಈ ನುಡಿಹಬ್ಬ ಮಧುರ ನೆನಪನ್ನು ಉಳಿಸಿದೆ ಎನ್ನುತ್ತಾರೆ ಸ್ಥಳದ ನಿವಾಸಿ ವಿಷ್ಣುಮೂರ್ತಿಗಳು. ಸಂಘಟನೆ, ಆಯೋಜನೆ, ಊಟ-ಉಪಚಾರದಲ್ಲಿನ ಶುಚಿತ್ವ-ರುಚಿತ್ವ ಎಲ್ಲವೂ ಎಲ್ಲರಿಗೂ ಮೆಚ್ಚುಗೆಯಾಗಿವೆ. ಆದರೆ ಈ ಸಮ್ಮೇಳನದಿಂದ ಕರ್ನಾಟಕಕ್ಕೆ, ಕನ್ನಡಕ್ಕೆ ಆದ ಲಾಭವೇನು ಎಂಬುದರ ಬಗ್ಗೆ, ಇದರ ಫಲಿತಾಂಶದ ಬಗ್ಗೆ ಚರ್ಚೆಯಾಗಬೇಕಿದೆ ಎನ್ನುತ್ತಾರವರು.

ಒಟ್ಟಿನಲ್ಲಿ ಜಡಿ ಮಳೆ ಹೊಡೆದು ನಿಂತಿದೆ. ಈಗ ಮರದಿಂದ ಉದುರುವ ಹನಿಗಳನ್ನು ಎಣಿಸುವುದಷ್ಟೇ ಬಾಕಿ.
ಮತ್ತಷ್ಟು
ಟೀಕೆ ಮಾಡ್ತಿರೋರು ಪತ್ರಿಕೆ ಓದಲ್ಲ: ಪೂಜಾರಿ
ಕಾಂಗ್ರೆಸ್ ಚುನಾವಣೆ ನಾಯಕತ್ವ: ಇನ್ನೂ ಅಸ್ಪಷ್ಟ
ಆರೋಪ ಬೇಡ, ದೂರು ನೀಡಿ: ಕುಮಾರ ಸವಾಲು
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಇಲ್ಲ ; ಎಂ.ವಿ ರಾಜಶೇಖರನ್
ಚಂದ್ರನತ್ತ ಇಸ್ರೋ ನಡೆ
ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಜೆಡಿಎಸ್ ಸಮಾವೇಶ