ಬಿಜೆಪಿ ಮುಖಂಡರ ನಿಯೋಗವೊಂದು ರಾಜ್ಯಪಾಲರನ್ನು ಭೇಟಿ ಮಾಡಿ ದತ್ತಪೂಜೆ ಹಾಗೂ ಶೋಭಾಯಾತ್ರೆಗೆ ಅನುವು ಮಾಡಿಕೊಡುವಂತೆ ಕೋರಿದೆ.ಇದೇ ತಿಂಗಳ 21ರಂದು ದತ್ತ ಜಯಂತಿ ನಡೆಯಲಿದ್ದು ಇದರ ಅಂಗವಾಗಿ ಹಮ್ಮಿಕೊಳ್ಳಲಾಗುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ರಾಜ್ಯಪಾಲರನ್ನು ಆಹ್ವಾನಿಸಲು ಮಾಜಿ ಶಾಸಕ ಸಿ.ಟಿ.ರವಿ ನೇತೃತ್ವದ ತಂಡ ರಾಜಭವನಕ್ಕೆ ತೆರಳಿತ್ತು.
2004ರಲ್ಲಿ ಅನುಸರಿಸಿದ ಪೂಜಾ ವಿಧಿವಿಧಾನಗಳನ್ನೇ ಈ ಬಾರಿಯೂ ಅನುಸರಿಸಲಾಗುವುದು ಎಂಬ ಭರವಸೆಯನ್ನು ಈ ಸಂದರ್ಭದಲ್ಲಿ ರಾಜ್ಯಪಾಲರಿಗೆ ನೀಡಲಾಯಿತು ಎಂದು ತಿಳಿದುಬಂದಿದೆ.
ತಂಡದ ಮನವಿಯನ್ನು ಆಲಿಸಿದ ರಾಜ್ಯಪಾಲರು, ಯಾವುದೇ ರೀತಿಯಲ್ಲಿ ಕಾನೂನು-ಶಾಂತಿಗಳಿಗೆ ಭಂಗವಾಗುವುದಿಲ್ಲ ಎಂದು ಮನವರಿಕೆಯಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಕುರಿತು ಕ್ರಮ ಕೈಗೊಳ್ಳುವ ಆಶ್ವಾಸನೆಯನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.
|