ಶಾರ್ಟ್ ಸರ್ಕ್ಯೂಟ್ನಿಂದ ಸಂಭವಿಸಿದ ಬೆಂಕಿ ಅಪಘಾತದಲ್ಲಿ ಶಾಂತಿನಗರದ ಬಿಎಂಟಿಸಿ ಡಿಪೋದಲ್ಲಿನ ಬಸ್ಸಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.ಈ ಅಪಘಾತದಿಂದ ಯಾರಿಗೂ ಹಾನಿಯಾಗಿಲ್ಲ. ಆದರೆ, ಸುಮಾರು 13 ಲಕ್ಷ ರೂ.ಮೌಲ್ಯದ ಈ ಬಸ್ನ ಮೇಲ್ಬಾಗ ಸುಟ್ಟುಹೋಗಿದ್ದು ನಷ್ಟದ ಪ್ರಮಾಣ ಸುಮಾರು 5 ಲಕ್ಷ ರೂಪಾಯಿಗಳಷ್ಟು ಎಂದು ಡಿಪೋ ಮೂಲಗಳು ತಿಳಿಸಿವೆ.
ಬೆಂಕಿ ಕಾಣಿಸಿಕೊಂಡಾಗ ಡಿಪೋದ ಸಿಬ್ಬಂದಿಯೇ ನಂದಿಸಲು ಪ್ರಯತ್ನಿಸಿದರಾದರೂ ನಂತರ ಅಗ್ನಿಶಾಮಕ ದಳದ ಸಹಾಯ ಪಡೆಯಲಾಯಿತು ಎಂದು ತಿಳಿದುಬಂದಿದೆ.
20 ಮಂದಿಗೆ ಹುಚ್ಚುನಾಯಿ ಕಡಿತ
ಬೆಂಗಳೂರಿಗೆ ಸಮೀಪದ ಚನ್ನಪಟ್ಟಣದ ತಗೆಚೆಗೆರೆ ಗ್ರಾಮದಲ್ಲಿ ಹುಚ್ಚುನಾಯಿಗಳ ಉಪಟಳ ಮಿತಿಮೀರಿದೆ. ಇದರ ಪರಿಣಾಮವಾಗಿ ಶಾಲಾಮಕ್ಕಳು ಹುಚ್ಚುನಾಯಿ ಕಡಿತಕ್ಕೆ ಒಳಗಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಸುಮಾರು 20 ಮಂದಿ ಹುಚ್ಚುನಾಯಿ ಕಡಿತಕ್ಕೆ ಒಳಗಾಗಿದ್ದು ಅವರನ್ನೆಲ್ಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದರೆ ಅವರಲ್ಲೊಬ್ಬ ಯುವಕನಿಗೆ ಕಣ್ಣಿನ ಸಮೀಪ ಕಚ್ಚಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಬೆಂಗಳೂರಿಗೆ ಕರೆತರಲಾಗಿದೆ ಎಂದು ಸುದ್ದಿಮೂಲಗಲು ತಿಳಿಸಿವೆ.
ರೇಷ್ಮೆ ಮತ್ತು ಸೆಣಬು ಉದ್ಯಮ ನೆಲೆಗೊಂಡಿರುವ ಚನ್ನಪಟ್ಟಣದ ಆಸುಪಾಸಿನಲ್ಲಿ ಮಟನ್ ಮಾರ್ಕೆಟ್ಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು ನಾಯಿಗಳ ಸಂತತಿಯ ಹೆಚ್ಚಳಕ್ಕೆ ಪರೋಕ್ಷ ಕಾರಣವಾಗಿದೆ ಎಂದು ತಿಳಿದುಬಂದಿದೆ.
ನಾಯಿಗಳ ನಿಯಂತ್ರಣಕ್ಕಾಗಿ ಲಸಿಕೆ ಹಾಕುವಿಕೆ ಮೂಲಕ ಅಗತ್ಯ ಕ್ರಮ ಕೈಗೊಳ್ಳಲಾಗಿದೆಯಾದರೂ ಈ ಹುಚ್ಚುನಾಯಿಗಳ ಸಂಖ್ಯೆ ಹೆಚ್ಚಿರುವುದು ಬೆಂಗಳೂರಿನ ಚಂದ್ರಾ ಲೇ ಓಟ್ನಲ್ಲಿ ಸಂಭವಿಸಿದ ದುರಂತವನ್ನು ನೆನಪಿಗೆ ತರುತ್ತವೆ ಎಂದು ಇಲ್ಲಿನ ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ.
|