ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೊಸ ವರ್ಷದಿಂದ ಹೊಸ ಅಧ್ಯಾಯ: ಪ್ರಕಾಶ್
NEWS ROOM
ಬರಲಿರುವ ಹೊಸ ವರ್ಷದ ಜನವರಿಯಿಂದ ತಮ್ಮ ರಾಜಕೀಯ ಜೀವನದ ಹೊಸ ಅಧ್ಯಾಯ ಪ್ರಾರಂಭವಾಗಲಿದೆ ಎಂದು ಮಾಜಿ ಸಚಿವ ಎಂ.ಪಿ.ಪ್ರಕಾಶ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ತಮ್ಮನ್ನು ಈಗಾಗಲೇ ಸಂಪರ್ಕಿಸಿರುವ ಎಲ್ಲ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಈ ತಿಂಗಳ ಕೊನೆಯೊಳಗಾಗಿ ಸಮಾಲೋಚನೆ ನಡೆಸುವುದಾಗಿ ತಿಳಿಸಿದರು.

ಗುಜರಾತ್ ವಿಧಾನಸಭಾ ಚುನಾವಣಾ ಫಲಿತಾಂಶ ಇದೇ ತಿಂಗಳ 23ರಂದು ಹೊರಬೀಳಲಿದ್ದು, ಅದು ರಾಜ್ಯದಲ್ಲಿನ ರಾಜಕೀಯ ಧೃವೀಕರಣಕ್ಕೆ ಮುನ್ನುಡಿ ಬರೆಯಲಿದೆ ಎಂದ ಪ್ರಕಾಶ್ ಯಾವ ಪಕ್ಷಕ್ಕೂ ಸೇರುವ ಕುರಿತು ಸ್ಪಷ್ಟ ನಿರ್ಧಾರವನ್ನು ಇನ್ನೂ ಕೈಗೊಂಡಿಲ್ಲ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಮೇಲೆ ಮಾಡಿರುವ ಅರೋಪಗಳು ಊಹೆಯಿಂದ ಕೂಡಿವೆ. ತಮ್ಮ ಬಗೆಗೆ ಯಾವುದೇ ಮಾಹಿತಿಯಿದ್ದರೂ ಅವರು ಬಹಿರಂಗಪಡಿಸಲಿ, ಸರಿ ಇದ್ದರೆ ಒಪ್ಪಿಕೊಳ್ಳುತ್ತೇನೆ ಎಂದು ಪ್ರಕಾಶ್ ಈ ಸಂದರ್ಭದಲ್ಲಿ ತಿಳಿಸಿದರು.
ಮತ್ತಷ್ಟು
ಬೀಳದ ಅಂಕಿತ: ಕುಮಾರಸ್ವಾಮಿ ವಿಷಾದ
ಅದಿರು ಕಳ್ಳಸಾಗಣೆ: 55 ಲಾರಿಗಳ ವಶ
ಬೆಂಕಿ ಅಪಘಾತ: ಬಸ್‌ಗೆ ಹಾನಿ
ಬಿಜೆಪಿ ಮುಖಂಡರಿಂದ ರಾಜ್ಯಪಾಲರ ಭೇಟಿ
ಸಿದ್ದರಾಮಯ್ಯಗೆ ಹುಣಸೂರಿನಿಂದ ಟಿಕೆಟ್‌ಗೆ ಮನವಿ
ನುಡಿಹಬ್ಬದ ಸಡಗರ ಮುಗೀತು; ಮುಂದ...?!