ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರವಾಸೋದ್ಯಮದಲ್ಲಿ ಕುಮಾರ ಅವ್ಯವಹಾರ: ಶ್ರೀರಾಮುಲು
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಾನು ಸಚಿವನಾಗಿದ್ದ ಪ್ರವಾಸೋದ್ಯಮ ಇಲಾಖೆಯಲ್ಲಿ ಸುಮಾರು 30-40 ಕೋಟಿ ರೂ. ಅವ್ಯವಹಾರ ಮಾಡಿದ್ದಾರೆಂದು ಮಾಜಿ ಸಚಿವ ಎಚ್.ಜಿ.ಶ್ರೀರಾಮುಲು ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಈ ಅವ್ಯವಹಾರದ ಕುರಿತು ತಮ್ಮಲ್ಲಿ ದಾಖಲೆಗಳಿವೆ. ಅದನ್ನು ಶೀಘ್ರದಲ್ಲಿ ಬಹಿರಂಗಪಡಿಸುವುದಾಗಿ ತಿಳಿಸಿದರು.

ನೀವೇ ಮಂತ್ರಿಗಳಾಗಿರುವಾಗ ನಿಮ್ಮ ಖಾತೆಯಲ್ಲಿ ಅವರು ಹೇಗೆ ಅವ್ಯವಹಾರ ಮಾಡಲು ಸಾಧ್ಯ ಎಂದು ಪ್ರಶ್ನೆ ಸುದ್ದಿಗಾರರಿಂದ ತೂರಿಬಂದಾಗ, ನಾನು ಸಚಿವನಾಗಿದ್ದರೂ ಕುಮಾರಸ್ವಾಮಿ ಮುಖ್ಯಮಂತ್ರಿಯ ಅಧಿಕಾರ ಚಲಾಯಿಸಿ ಎಲ್ಲ ಕಡತಗಳನ್ನೂ ಪಾಸ್ ಮಾಡುತ್ತಿದ್ದರು. ಕೆಲವು ಸಲ ನನ್ನ ಗಮನಕ್ಕೇ ಬರುತ್ತಿರಲಿಲ್ಲ. ಕೆಲವು ಸಲ ಈ ಕುರಿತು ಅಸಮಾಧಾನವನ್ನೂ ತೋಡಿಕೊಂಡಿದ್ದೇನೆ. ಆದರೆ ಸಮ್ಮಿಶ್ರ ಸರ್ಕಾರದಲ್ಲಿದ್ದ ಕಾರಣ ಸುಮ್ಮನಿರಬೇಕಾಗಿ ಬರುತ್ತಿತ್ತು ಎಂದು ಶ್ರೀರಾಮುಲು ಉತ್ತರಿಸಿದರು.
ಮತ್ತಷ್ಟು
ಹೊಸ ವರ್ಷದಿಂದ ಹೊಸ ಅಧ್ಯಾಯ: ಪ್ರಕಾಶ್
ಬೀಳದ ಅಂಕಿತ: ಕುಮಾರಸ್ವಾಮಿ ವಿಷಾದ
ಅದಿರು ಕಳ್ಳಸಾಗಣೆ: 55 ಲಾರಿಗಳ ವಶ
ಬೆಂಕಿ ಅಪಘಾತ: ಬಸ್‌ಗೆ ಹಾನಿ
ಬಿಜೆಪಿ ಮುಖಂಡರಿಂದ ರಾಜ್ಯಪಾಲರ ಭೇಟಿ
ಸಿದ್ದರಾಮಯ್ಯಗೆ ಹುಣಸೂರಿನಿಂದ ಟಿಕೆಟ್‌ಗೆ ಮನವಿ