ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರತಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ಸಂಗತವೇ?
ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಚ್.ಕೆ.ಪಾಟೀಲ್ ಅವರಿಂದ ರಾಜೀನಾಮೆ ಪಡೆಯಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆದ ನಂತರ ನಿರ್ಧರಿಸಲಾಗುವುದು ಎಂದು ವಿಧಾನ ಪರಿಷತ್ತಿನ ಸಭಾಪತಿ ಪ್ರೊ| ಬಿ.ಕೆ.ಚಂದ್ರಶೇಖರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳು ಅಸ್ತಿತ್ವದಲ್ಲಿರುವುದಿಲ್ಲ. ಇಂಥ ಸನ್ನಿವೇಶದಲ್ಲಿ ಪ್ರತಿಪಕ್ಷ ನಾಯಕನ ಹುದ್ದೆ ಮುಂದುವರಿಯಬಾರದೆಂಬ ಅಭಿಪ್ರಾಯವಿದೆ. ಈ ಕುರಿತು ತಜ್ಞರ ಅಭಿಪ್ರಾಯ ಪಡೆಯಬೇಕಿದೆ ಎಂದು ತಿಳಿಸಿದರು.

ಆಡಳಿತ ಪಕ್ಷವೇ ಇಲ್ಲದಿರುವ ಕಾರಣ ಅಧಿವೇಶನದಲ್ಲಿ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸುವವರಾರು? ಪ್ರಶ್ನೋತ್ತರ ಅವಧಿ ಇರುತ್ತದೆಯೇ? ಎಂಬ ಪ್ರಶ್ನೆಗಳು ಪತ್ರಿಕಾಗೋಷ್ಠಿಯಲ್ಲಿ ಹೊರಬಂದಾಗ, ಸಂವಿಧಾನದ ಪ್ರಕಾರ ಅಧಿವೇಶನ ನಡೆಸುವುದು ಅನಿವಾರ್ಯ. ಈ ಅಧಿವೇಶನವೂ ಚಿಂತನಗೋಷ್ಠಿ ರೂಪದಲ್ಲೂ ಇರಬಹುದು. ಪ್ರಶ್ನೋತ್ತರ, ಗಮನ ಸೆಳೆಯುವ ಸೂಚನೆಯಂಥ ಸಾಮಾನ್ಯ ನಡವಳಿಕೆಗಳು ಇಲ್ಲದೆಯೇ ಅಧಿವೇಶನ ಕರೆಯಲು ಸಾಧ್ಯವಿದೆ ಎಂದು ಚಂದ್ರಶೇಖರ್ ಉತ್ತರಿಸಿದರು.

ವಿಧಾನ ಪರಿಷತ್ ಅಧಿವೇಶನವನ್ನು ಫೆಬ್ರವರಿ ವೇಳೆಗೆ ನಡೆಸುವ ಬಗೆಗೆ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರೊಂದಿಗೆ ಚರ್ಚಿಸಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಅವರು ತಿಳಿಸಿದ್ದಾರೆ ಎಂದು ಚಂದ್ರಶೇಖರ್ ವಿವರಣೆ ನೀಡಿದರು.
ಮತ್ತಷ್ಟು
ಪ್ರವಾಸೋದ್ಯಮದಲ್ಲಿ ಕುಮಾರ ಅವ್ಯವಹಾರ: ಶ್ರೀರಾಮುಲು
ಹೊಸ ವರ್ಷದಿಂದ ಹೊಸ ಅಧ್ಯಾಯ: ಪ್ರಕಾಶ್
ಬೀಳದ ಅಂಕಿತ: ಕುಮಾರಸ್ವಾಮಿ ವಿಷಾದ
ಅದಿರು ಕಳ್ಳಸಾಗಣೆ: 55 ಲಾರಿಗಳ ವಶ
ಬೆಂಕಿ ಅಪಘಾತ: ಬಸ್‌ಗೆ ಹಾನಿ
ಬಿಜೆಪಿ ಮುಖಂಡರಿಂದ ರಾಜ್ಯಪಾಲರ ಭೇಟಿ