ಬಳ್ಳಾರಿ ಜಿಲ್ಲೆಯಲ್ಲಿ ಜೆಡಿಎಸ್‌ಗೆ ಆಧಾರವಾಗಿದ್ದ ಎಂ.ಪಿ.ಪ್ರಕಾಶ್, ಸಂತೋಷ್ ಲಾಡ್ ಹಾಗೂ ಸೂರ್ಯನಾರಾಯಣರೆಡ್ಡಿಯವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವಂತೆ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ವಹಾದ್ ಆಗ್ರಹಿಸಿದ್ದಾರೆ.
ಮುಂಬರಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲು ಬೆಂಗಳೂರಿಗೆ ಬಂದಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪೃಥ್ವಿರಾಜ್ ಚೌಹಾಣ್ ಅವರಿಗೆ ವಹಾದ್ ಈ ಮನವಿ ಸಲ್ಲಿಸಿದ್ದಾರೆ.
ಪ್ರಬಲ ಲಿಂಗಾಯಿತ ಕೋಮಿಗೆ ಸೇರಿದ ಎಂ.ಪಿ.ಪ್ರಕಾಶ್‌ರವರಿಗೆ ಜಿಲ್ಲೆಯಲ್ಲಿ ಒಳ್ಳೆಯ ಹೆಸರಿದೆ. ಅವರು ಕಾಂಗ್ರೆಸ್‌ಗೆ ಸೇರಿದರೆ ಈ ಕುರಿತು ಯಾರೂ ಅಪಸ್ವರ ಎತ್ತುವುದಿಲ್ಲ. ಆದರೆ ಹೊಸಬರ ಆಗಮನದಿಂದ ಹಳಬರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ವಹಾದ್ ಅಭಿಪ್ರಾಯಪಟ್ಟಿದ್ದಾರೆ.
ಪ್ರಕಾಶ್ ಹಾಗೂ ಅವರ ಬೆಂಬಲಿಗ ಶಾಸಕರ ಸೇರ್ಪಡೆಯಿಂದ ಪಕ್ಷ ಬಲಗೊಳ್ಳುವುದೇ ಅಲ್ಲದೇ, ಜೆಡಿಎಸ್ ಪ್ರಾಬಲ್ಯ ಮುರಿಯಲೂ ನೆರವಾಗುತ್ತದೆ ಎಂದು ವಹಾದ್ ತಿಳಿಸಿದ್ದಾರೆ.
|