ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕುಮಾರಸ್ವಾಮಿಗೆ ತೀವ್ರ ಹೃದಯಾಘಾತ
ND
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ತೀವ್ರ ಹೃದಯಾಘಾತವಾಗಿದ್ದು ಅವರನ್ನು ವೊಕ್ಹಾರ್ಟ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಹೃದಯಕ್ಕೆ ರಕ್ತ ಪೂರೈಕೆ ಮಾಡುವ ರಕ್ತನಾಳದಲ್ಲಿ ತೊಂದರೆಯಿದ್ದು ಇದನ್ನು ಆಂಜಿಯೋಪ್ಲಾಸ್ಟಿ ಶಸ್ತ್ತ್ರಚಿಕಿತ್ಸೆಯ ಮೂಲಕ ಸರಿಪಡಿಸಲಾಗುವುದು ಎಂದು ವೊಕ್ಹಾರ್ಟ್ ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಕುಮಾರಸ್ವಾಮಿಯವರಿಗೆ 20 ದಿನಗಳ ವಿಶ್ರಾಂತಿಗೆ ವೈದ್ಯರು ಸಲಹೆ ಮಾಡಿದ್ದು, ರಾಜ್ಯಾದ್ಯಂತ ಅವರು ಕೈಗೊಳ್ಳಲು ಉದ್ದೇಶಿಸಿದ್ದ ಚುನಾವಣಾ ಪೂರ್ವ ಪ್ರವಾಸ ಈಗ ಮುಂದಕ್ಕೆ ಹೋಗಿದೆ.

ಹೃದಯಾಘಾತ ಸಂಭವಿಸಿದ್ದು ಹೀಗೆ

ತಮ್ಮ ಸಹೋದರ ರೇವಣ್ಣನವರ 51ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಶಾಸಕ ಮಿತ್ರರೊಡನೆ ಭೋಜನ ಕೂಟದಲ್ಲಿ ಕುಮಾರಸ್ವಾಮಿ ಭಾಗವಹಿಸಿದ್ದಾಗ ಅವರಿಗೆ ಎದೆನೋವು ಕಾಣಿಸಿಕೊಂಡಿತು. ಆದರೆ ಅದನ್ನವರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇಂದು ಬೆಳಗ್ಗೆ ಹೃದಯಾಘಾತವಾದ ಕೂಡಲೇ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹೃದಯಾಘಾತದಿಂದಾಗಿ ಕುಮಾರಸ್ವಾಮಿಯವರ ರಕ್ತದಲ್ಲಿನ ಸಕ್ಕರೆ ಪ್ರಮಾಣದಲ್ಲಿ ಏರುಪೇರುಂಟಾಗಿದ್ದು ಇದರ ನಿಯಂತ್ರಣಕ್ಕಾಗಿ ವೈದ್ಯರು ಅಗತ್ಯ ಚಿಕಿತ್ಸೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಕಳೆದ 3 ತಿಂಗಳಿಂದ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳಿಂದ ಕುಮಾರಸ್ವಾಮಿಯವರು ತಮ್ಮ ಆರೋಗ್ಯದ ಕಡೆಗೆ ಗಮನವಿಟ್ಟಿರಲಿಲ್ಲ. ಆದ್ದರಿಂದ ಆರೋಗ್ಯ ಹದಗೆಟ್ಟಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಮತ್ತಷ್ಟು
ಶೋಭಾಯಾತ್ರೆಗೆ ಅವಕಾಶ ಬೇಡ: ಕೋಮು ಸೌಹಾರ್ದ ವೇದಿಕೆ
ಪ್ರಕಾಶ್ ಕಾಂಗ್ರೆಸ್‌ಗೆ ಬರಲಿ: ಅಬ್ದುಲ್ ವಹಾಬ್
ಪ್ರತಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ಸಂಗತವೇ?
ಪ್ರವಾಸೋದ್ಯಮದಲ್ಲಿ ಕುಮಾರ ಅವ್ಯವಹಾರ: ಶ್ರೀರಾಮುಲು
ಹೊಸ ವರ್ಷದಿಂದ ಹೊಸ ಅಧ್ಯಾಯ: ಪ್ರಕಾಶ್
ಬೀಳದ ಅಂಕಿತ: ಕುಮಾರಸ್ವಾಮಿ ವಿಷಾದ