ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕುಮಾರಸ್ವಾಮಿಗೆ ನಾಳೆ ಶಸ್ತ್ತ್ರಚಿಕಿತ್ಸೆ
PTI
ವೊಕ್ಹಾರ್ಟ್ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ನಾಳೆ (ಗುರುವಾರ) ತೆರೆದ ಹೃದಯದ ಶಸ್ತ್ತ್ರಚಿಕಿತ್ಸೆ ನಡೆಯಲಿದೆ.ಹೃದಯಕ್ಕೆ ರಕ್ತ ಸರಬರಾಜು ಮಾಡುವ ರಕ್ತನಾಳದಲ್ಲಿ ಅಡಚಣೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಕುಮಾರಸ್ವಾಮಿಯವರಿಗೆ ಡಾ| ವಿವೇಕ್ ಜವಳಿ ನೇತೃತ್ವದ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಇತ್ತೀಚಿನ ರಾಜಕೀಯ ವಿದ್ಯಮಾನಗಳಿಂದ, ಎಡೆಬಿಡದ ಕೆಲಸಗಳ ಕಾರಣಗಳಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಕುಮಾರಸ್ವಾಮಿ ರಕ್ತನಾಳದ ತೊಂದರೆಗೆ ಸಂಬಂಧಿಸಿದ ಶಸ್ತ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಹಿಂದೇಟುಹಾಕಿದ್ದರು. ಇದು ತೊಂದರೆಯ ಉಲ್ಬಣಕ್ಕೆ ಕಾರಣವಾಗುವ ಲಕ್ಷಣಗಳು ಕಂಡುಬಂದದ್ದರಿಂದ ಆಸ್ಪತ್ರೆಗೆ ದಾಖಲು ಮಾಡಲಾಯಿತು ಎಂದು ತಿಳಿದುಬಂದಿದೆ.

ನಾಳೆ ತೆರೆದ ಹೃದಯದ ಶಸ್ತ್ತ್ರಚಿಕಿತ್ಸೆ ನಡೆದ ನಂತ ಕನಿಷ್ಠ 10 ದಿನಗಳ ಕಾಲವಾದರೂ ಆಸ್ಪತ್ರೆಯಲ್ಲಿ ಅವರು ಇರಬೇಕಾಗುತ್ತದೆ. ನಂತರ ಸುಮಾರು 20 ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಬೇಕಾಗುತ್ತದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಮತ್ತಷ್ಟು
ಚುನಾವಣೆ ನಂತರ ಅಕ್ರಮ ಗಣಿಗಾರಿಕೆ ವರದಿ
ಹಾವು ಹುತ್ತದಲ್ಲಿ ಮಾತ್ರವಲ್ಲ... ವಿಸ್ಕಿ ಬಾಟಲಿಯಲ್ಲೂ..!!
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಗರಣಗಳ ತನಿಖೆ
ಕುಮಾರಸ್ವಾಮಿಗೆ ತೀವ್ರ ಹೃದಯಾಘಾತ
ಶೋಭಾಯಾತ್ರೆಗೆ ಅವಕಾಶ ಬೇಡ: ಕೋಮು ಸೌಹಾರ್ದ ವೇದಿಕೆ
ಪ್ರಕಾಶ್ ಕಾಂಗ್ರೆಸ್‌ಗೆ ಬರಲಿ: ಅಬ್ದುಲ್ ವಹಾಬ್