ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಖ್ಯಮಂತ್ರಿ ಐ ಲವ್ ಯೂ ನಿರ್ಬಂಧಕ್ಕೆ ನಕಾರ
ಖ್ಯಾತ ಪತ್ರಕರ್ತ ರವಿ ಬೆಳಗೆರೆ ನಿರ್ಮಾಣ-ನಿರ್ದೇಶನದ ಮುಖ್ಯಮಂತ್ರಿ ಐ ಲವ್ ಯೂ ಚಲನಚಿತ್ರ ನಿರ್ಮಾಣದ ಮುಂದುವರಿಕೆಗೆ ಇಲ್ಲಿನ ನ್ಯಾಯಾಲಯ ಅನುಮತಿ ನೀಡಿದೆ.

ಈ ಸಂಬಂಧ ತಡೆಯಾಜ್ಞೆ ನೀಡುವಂತೆ ಕೋರಲಾಗಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ್ದು, ಚಿತ್ರೀಕರಣ ಮುಂದುವರೆಸಲು ಅನುಮತಿ ನೀಡಲಾಗಿದ್ದರೂ ದೇವೇಗೌಡರ ಕುಟುಂಬ ಸದಸ್ಯರ ಚಾರಿತ್ರ್ಯವಧೆ ಮಾಡುವಂತಹ ಹೇಳಿಕೆ ಅಥವಾ ಪ್ರಚಾರ ನಡೆಸದಂತೆ ಜಿಲ್ಲಾ ಪ್ರಧಾನ ಸಿವಿಲ್ ನ್ಯಾಯಾಧೀಶ ಎನ್.ಸಿ.ಶ್ರೀನಿವಾಸ್ ತಮ್ಮ ಮಧ್ಯಂತರ ತೀರ್ಪಿನಲ್ಲಿ ಆದೇಶಿಸಿದ್ದಾರೆ ಎಂದು ತಿಳಿದುಬಂದಿದೆ.

ಮುಖ್ಯಮಂತ್ರಿ ಐ ಲವ್ ಯೂ ಚಿತ್ರದ ವಿವಾದಕ್ಕೆ ಸಂಬಂಧಿಸಿದ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರು, ಯಾರದೇ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಿರ್ಬಂಧ ಹೇರುವುದು ಸಂವಿಧಾನಬದ್ಧ ನೀತಿಯಲ್ಲ. ಚಿತ್ರದ ಚಿತ್ರೀಕರಣ ಮುಂದುವರಿಸಬಹುದಾಗಿದೆ. ಆದರೆ ಕೆಲವು ತಾತ್ಕಾಲಿಕ ಷರತ್ತುಗಳನ್ನು ಪಾಲಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ನ್ಯಾಯಾಲಯದ ತೀರ್ಪು ಹೊರಬೀಳುವವರೆಗೆ ದೇವೇಗೌಡರ ಕುಟುಂಬದ ಸದಸ್ಯರ ಬಗ್ಗೆ ಮಾಧ್ಯಮಗಳಲ್ಲಿ ಅವಹೇಳನ ಮಾಡುವುದಾಗಲೀ, ವ್ಯಂಗ್ಯೋಕ್ತಿಗಳನ್ನು ಬಳಸುವುದಾಗಲೀ ಮಾಡಬಾರದು. ಜೊತೆಗೆ ಅದಕ್ಕೆ ಸಂಬಂಧಿಸಿದ ಪತ್ರಿಕಾ ಪ್ರಕಟಣೆ, ಸಂದರ್ಶನಗಳನ್ನೂ ಮಾಡುವಂತಿಲ್ಲ ಎಂದು ರವಿ ಬೆಳಗೆರೆಯವರಿಗೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.
ಮತ್ತಷ್ಟು
ಕುಮಾರಣ್ಣನ ವಿರುದ್ಧ ದಾವೆ
ಕುಮಾರಸ್ವಾಮಿಗೆ ನಾಳೆ ಶಸ್ತ್ತ್ರಚಿಕಿತ್ಸೆ
ಚುನಾವಣೆ ನಂತರ ಅಕ್ರಮ ಗಣಿಗಾರಿಕೆ ವರದಿ
ಹಾವು ಹುತ್ತದಲ್ಲಿ ಮಾತ್ರವಲ್ಲ... ವಿಸ್ಕಿ ಬಾಟಲಿಯಲ್ಲೂ..!!
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಗರಣಗಳ ತನಿಖೆ
ಕುಮಾರಸ್ವಾಮಿಗೆ ತೀವ್ರ ಹೃದಯಾಘಾತ