ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜನತಾ ಜನಾರ್ದನರಲ್ಲಿ ನ್ಯಾಯ ಕೇಳುವೆ: ಪುತ್ತಿಗೆ ಶ್ರೀ
ಪರ್ಯಾಯ ಹಾಗೂ ಶ್ರೀಕೃಷ್ಣ ಪೂಜೆಗೆ ಉಡುಪಿಯ ಅಷ್ಠ ಮಠಗಳು ಅವಕಾಶ ಕಲ್ಪಿಸದಿದ್ದಲ್ಲಿ ಕೊನೆಯದಾಗಿ ಜನರಲ್ಲಿ ನ್ಯಾಯ ಕೇಳುವುದಾಗಿ ಪುತ್ತಿಗೆ ಶ್ರೀಗಳಾದ ಸುಗುಣೇಂದ್ರ ತೀರ್ಥರು ತಿಳಿಸಿದ್ದಾರೆ.

ಪರ್ಯಾಯಕ್ಕೆ ಇನ್ನೂ ಒಂದು ತಿಂಗಳ ಕಾಲಾವಕಾಶವಿದೆ. ಅಷ್ಟರೊಳಗಾಗಿ ಈ ವಿವಾದಕ್ಕೆ ತೆರೆ ಬೀಳಬಹುದು ಎಂಬ ವಿಶ್ವಾಸ ತಮ್ಮದು ಎಂದಿರುವ ಶ್ರೀಗಳು, ಶ್ರೀಕೃಷ್ಣ ಪೂಜೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಶ್ರೀಕೃಷ್ಣ ಎಲ್ಲ ಸಮಸ್ಯೆಗಳನ್ನೂ ಬಗೆಹರಿಸಲಿದ್ದಾನೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಈ ವೈಚಾರಿಕ ಸಂವಾದದಲ್ಲಿ ವೈಚಾರಿಕ ಭಿನ್ನಾಭಿಪ್ರಾಯಗಳಿದ್ದರೂ ಸತ್ವಯುತ ವಿಚಾರಗಳು ಇದರ ಹೂರಣದಲ್ಲಿವೆ. ನಮಗೆ ನಮ್ಮ ದೇಶ ಭಾರತ ಶ್ರೇಷ್ಠವಾದರೆ, ವಿದೇಶಿಯರಿಗೆ ಅವರ ದೇಶವೇ ಮುಖ್ಯ. ಸೃಷ್ಟಿಕರ್ತನ ದೃಷ್ಟಿಯಲ್ಲಿ ಇಡೀ ಪೃಥ್ವಿಯೇ ಪವಿತ್ರ, ಸರ್ವಶ್ರೇಷ್ಠ. ಸಮುದ್ರ ದಾಟಿದ ಮಾತ್ರಕ್ಕೆ ಅಪವಿತ್ರರಾದಂತಾಯಿತು ಎಂಬ ಚಿಂತನೆಗಳನ್ನು ಒಪ್ಪಲಾಗುವುದಿಲ್ಲ ಎಂದು ಶ್ರೀಗಳು ಈ ಸಂದರ್ಭದಲ್ಲಿ ಪುನರುಚ್ಚರಿಸಿದ್ದಾರೆ.

ರಾಜಕೀಯದಲ್ಲಿ ನೇರವಾಗಿ ಭಾಗವಹಿಸದೇ ರಾಜಕಾರಣಿಗಳಿಗೆ ಮಠಾಧೀಶರು ಅಗತ್ಯ ಮಾರ್ಗದರ್ಶನ ಕೊಡಬಹುದು. ನಾಡಿನ-ಜನರ ಹಿತದೃಷ್ಟಿಯಿಂದ ಆಡಳಿತ ವ್ಯವಸ್ಥೆಗೆ ಯಾರೇ ಮಾರ್ಗದರ್ಶನ ಕೊಟ್ಟರೂ ತಪ್ಪಿಲ್ಲ ಎಂದು ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.
ಮತ್ತಷ್ಟು
ಮುಖ್ಯಮಂತ್ರಿ ಐ ಲವ್ ಯೂ ನಿರ್ಬಂಧಕ್ಕೆ ನಕಾರ
ಕುಮಾರಣ್ಣನ ವಿರುದ್ಧ ದಾವೆ
ಕುಮಾರಸ್ವಾಮಿಗೆ ನಾಳೆ ಶಸ್ತ್ತ್ರಚಿಕಿತ್ಸೆ
ಚುನಾವಣೆ ನಂತರ ಅಕ್ರಮ ಗಣಿಗಾರಿಕೆ ವರದಿ
ಹಾವು ಹುತ್ತದಲ್ಲಿ ಮಾತ್ರವಲ್ಲ... ವಿಸ್ಕಿ ಬಾಟಲಿಯಲ್ಲೂ..!!
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಗರಣಗಳ ತನಿಖೆ